ಮಡಿಕೇರಿ, ಆ. 14: ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾಂಗ್ರೆಸ್ ವತಿಯಿಂದ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.

ಡಿಸಿಸಿ ಸದಸ್ಯರಾದ ಪುಷ್ಪ ಪೂಣಚ್ಚ ಅವರ ಪ್ರಯೋಜಕತ್ವದಲ್ಲಿ ಒಂದು ಸಾವಿರ ಮಾಸ್ಕ್‍ಗಳನ್ನು ವಿತರಿಸಲಾಯಿತು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಯೋಜಕ ತೆನ್ನಿರಾ ಮೈನಾ ಮಾತನಾಡಿ, ಕೊರೊನಾ ಸೋಂಕು ಸಂಬಂಧಿಸಿದ ಪರಿಕರಗಳು ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಂದಿದ್ದು, ಪ್ರತಿ ಗ್ರಾಮಗಳಿಗೆ ತೆರಳಿ ಸಾರ್ವಜನಿಕರಿಗೆ ಕೋವಿಡ್ ತಪಾಸಣೆ ನಡೆಸಲಾಗುವುದು ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿ ಗ್ರಾ.ಪಂ. ಮಟ್ಟದ ಇಬ್ಬರು ಕೊರೊನಾ ವಾರಿಯರ್ಸ್‍ಗೆ ರೂ. 2 ಲಕ್ಷ ಆರೋಗ್ಯ ವಿಮೆ ಮಾಡಿರುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸದಾ ಮುದ್ದಪ್ಪ, ಕಾಂಗ್ರೆಸ್ ಕಾರ್ಯಕರ್ತರಾದ ಸೈಮನ್, ಕೋಚನಾ ಮೋಹನ್, ಎಂ.ಎಂ. ಹನೀಫ್, ಸೆಬಾಸ್ಟಿಯನ್ ಹಾಜರಿದ್ದರು.