ನಾಪೆÇೀಕ್ಲು, ಆ. 14: ವಿಶ್ವ ಹಿಂದೂ ಪರಿಷತ್ ವತಿಯಿಂದ ಬಲ್ಲಮಾವಟಿಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆರ್‍ಎಸ್‍ಎಸ್ ಮುಖಂಡ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ರಕ್ಷಾ ಬಂಧನ ಸೋದರತ್ವದ ಸಂಕೇತವಾಗಿದೆ ಎಂದರು.
ಈ ಸಂದರ್ಭ ಧ್ವಜ ವಂದನೆ ಸ್ವೀಕರಿಸಿ ರಾಖಿಯನ್ನು ಪರಸ್ಪರ ಕಟ್ಟಲಾಯಿತು. ಕಾರ್ಯಕ್ರಮದಲ್ಲಿ ಆರ್‍ಎಸ್‍ಎಸ್ ಮುಖಂಡರಾದ ಕಂಗಾಂಡ ಜಾಲಿ ಪೂವಪ್ಪ, ಶಿವಚಾಳಿಯಂಡ ಕಿಶೋರ್, ಕರವಂಡ ಅಪ್ಪಣ್ಣ, ಮುಕ್ಕಾಟಿರ ಸುತನ್, ಚಿಂಗಪ್ಪ, ಚಂಗೇಟಿರ ಕುಮಾರ್ ಸೋಮಣ್ಣ, ಸಾಬು, ಚೋಕಿರ ಭೀಮಯ್ಯ, ತಾಪಂಡ ವರುಣ್, ಮತ್ತಿತರರು ಇದ್ದರು.