ಪೆÇನ್ನಂಪೇಟೆ, ಆ. 14: ಇಲ್ಲಿನ ಕೃಷ್ಣನಗರದ 33 ವರ್ಷದ ಪುರುಷರೊಬ್ಬರಿಗೆ ಕೊರೋನ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿ ವಾಸವಾಗಿದ್ದ ಮನೆ ಸಮೀಪದ ಮೂರು ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಈ ಸಂದರ್ಭ ಪೆÇನ್ನಂಪೇಟೆ ಕಂದಾಯ ಅಧಿಕಾರಿ ರಾಧಾಕೃಷÀ್ಣ, ಪಿಡಿಓ ಪುಟ್ಟರಾಜು, ಗ್ರಾಮ ಲೆಕ್ಕಿಗರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.
ಸಿದ್ದಾಪುರ: ಸಿದ್ದಾಪುರದ ಕರಡಿಗೋಡು ಚಿಕ್ಕನಳ್ಳಿ ಭಾಗದಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಆ ಭಾಗದ ಮನೆಗಳನ್ನು ಸೀಲ್ ಡೌನ್ ಮಾಡಲಾಯಿತು. ಈ ಸಂದರ್ಭ ಅಮ್ಮತಿ ಹೋಬಳಿ ಕಂದಾಯ ಪರಿವೀಕ್ಷಕ ಹರೀಶ್ ಗ್ರಾಮಲೆಕ್ಕಿಗ ಅನೀಶ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಪೆÇಲೀಸ್ ಸಿಬ್ಬಂದಿಗಳು ಹಾಜರಿದ್ದರು.
*ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬರಡಿ ಸಮೀಪ ವ್ಯಕ್ತಿಯೊಬ್ಬರಿಗೆ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಆ ಭಾಗದ ಮನೆಗಳನ್ನು ಸೀಲ್ ಡೌನ್ ಮಾಡಲಾಯಿತು. ಈ ಸಂದರ್ಭ ಕುಶಾಲನಗರ ಹೋಬಳಿ ಕಂದಾಯ ಪರಿವೀಕ್ಷಕ ಮಧುಸೂದನ್, ಗ್ರಾಮಲೆಕ್ಕಿಗ ಸಂತೋಷ್, ಗ್ರಾಮ ಪಂಚಾಯಿತಿ ಪಿಡಿಓ ಅನಿಲ್ ಕುಮಾರ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು, ಪೆÇಲೀಸ್ ಸಿಬ್ಬಂದಿಗಳು ಹಾಜರಿದ್ದರು.
ಸುಂಟಿಕೊಪ್ಪ: ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿಗೆ ಸೇರಿದ ಹಾಲೇರಿ ಗ್ರಾಮದ ತಾತಿಬಾಣೆ ಪೈಸಾರಿಯ 39 ವರ್ಷದ ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಆ ಪ್ರದೇಶವನ್ನು ನಿಯಂತ್ರಿತ ವಲಯ ಎಂದು ಘೋಷಿಸಿ 14 ದಿನಗಳವರೆಗೆ ಸೀಲ್ಡೌನ್ ಮಾಡಲಾಗಿದೆ.
ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜು ಅವರ ಮಾರ್ಗದರ್ಶನದಲ್ಲಿ ಕಂದಾಯ ನಿರೀಕ್ಷಕ ಶಿವಪ್ಪ, ಗ್ರಾಮ ಲೆಕ್ಕಿಗ ದಪ್ನಾ, ಕೆದಕಲ್ ಪಿಡಿಒ ವೀಣಾ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಅವರ ಮನೆಗೆ ತೆರಳಿ ಮಾಹಿತಿ ಕಲೆ ಹಾಕಿ ಸೂಕ್ತ ಸಲಹೆ ನೀಡಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ವತಿಯಿಂದ ಔಷಧಿ ಸಿಂಪಡಿಸಿ ನಂತರ ಸೀಲ್ಡೌನ್ ಮಾಡಲಾಯಿತು.
ವೀರಾಜಪೇಟೆ: ವೀರಾಜಪೇಟೆಯ ಪÀಂಜರ್ಪೇಟೆಗೆ ಒತ್ತಾಗಿರುವ ಕಲ್ಲುಬಾಣೆಯ ಮತ್ತೊಂದು ಭಾಗದಲ್ಲಿ ವ್ಯಕ್ತಿಯೋರ್ವರಿಗೆ ಕೊರೊನಾ ತಪಾಸಣೆ ವರದಿಯಲ್ಲಿ ಪಾಸಿಟಿವ್ ಬಂದ ಕಾರಣ ಕಲ್ಲುಬಾಣೆಯ ಮತ್ತೊಂದು ಭಾಗದಲ್ಲಿ ಸೀಲ್ಡೌನ್ ಮಾಡಿದ ಅಧಿಕಾರಿಗಳು ಈ ಮನೆಯ ಆಜುಬಾಜುದಾರರಿಗೆ ಸಾರ್ವಜನಿಕ ಸಂಪರ್ಕದಿಂದ ತಡೆ ಮಾಡಿದ್ದಾರೆ.
ವೀರಾಜಪೇಟೆ ತಾಲೂಕು ಆಡಳಿತದ ಕಂದಾಯ ಇಲಾಖೆಯ ರೆವಿನ್ಯೂ ಇನ್ಸ್ಪೆಕ್ಟರ್ ಪಳಂಗಪ್ಪ, ಪೊಲೀಸ್ ಸಬ್ಇನ್ಸ್ಪೆಕ್ಟರ್ ಬೋಜಪ್ಪ, ತಾಲೂಕು ಆರೋಗ್ಯ ತಂಡ, ಆಶಾ ಕಾರ್ಯಕರ್ತೆಯರು ಈ ಸಂದರ್ಭ ಹಾಜರಿದ್ದರು.
*ಕುಕ್ಲೂರು ಗ್ರಾಮದ ಒಂದು ಭಾಗದಲ್ಲಿ 44 ವರ್ಷ ವಯಸ್ಸಿನ ಪುರುಷರೊಬ್ಬರಿಗೆ ಕೊರೊನಾ ವರದಿಯಲ್ಲಿ ಪಾಸಿಟಿವ್ ಬಂದ ಕಾರಣ ಗ್ರಾಮದ ಒಂದು ಭಾಗದಲ್ಲಿ ಸೀಲ್ಡೌನ್ ಮಾಡಿ ಸಾರ್ವಜನಿಕರ ಸಂಪರ್ಕದಿಂದ ತಡೆ ಮಾಡಲಾಗಿದೆ.
ಈ ಸೀಲ್ಡೌನ್ ಸಂದರ್ಭ ಕಂದಾಯ ಅಧಿಕಾರಿ ಪಳಂಗಪ್ಪ ಪ್ರಕಾಶ್, ತಾಲೂಕು ಆರೋಗ್ಯ ತಂಡ, ಪೊಲೀಸರು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.
ಸೋಮವಾರಪೇಟೆ: ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ತಾಲೂಕಿನ ಶಾಂತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಗ ಗ್ರಾಮದ ಒಂದು ಮನೆಯನ್ನು ಸೀಲ್ಡೌನ್ ಮಾಡಲಾಯಿತು. ಪ್ರತ್ಯೇಕವಾಗಿ ಒಂದೇ ಮನೆ ಇರುವ ಹಿನ್ನೆಲೆ, ಸೋಂಕಿತರ ಮನೆಯನ್ನು ಮಾತ್ರ ಕಂದಾಯ ಇಲಾಖೆಯ ಸುರೇಶ್ ಹಾಗೂ ಸಿಬ್ಬಂದಿಗಳು ಸೀಲ್ಡೌನ್ ಮಾಡಿ, ಕೊರೊನಾ ಸಂಬಂಧಿತ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಮನೆ ಮಂದಿಗೆ ಸೂಚಿಸಿದರು.