ಸೋಮವಾರಪೇಟೆ, ಆ. 14: ಪುಷ್ಪಗಿರಿ ಬೆಟ್ಟಶ್ರೇಣಿ ವ್ಯಾಪ್ತಿಯ ಶಾಂತಳ್ಳಿ ಹೋಬಳಿಯಾದ್ಯಂತ ಸಾಧಾರಣ ಮಳೆಯಾಗುತ್ತಿದ್ದು, ವಾತಾವರಣ ಅತಿ ಶೀತದಿಂದ ಕೂಡಿದೆ.
ಕಳೆದ ವಾರದ 5 ದಿನಗಳಲ್ಲಿ, ದಿನವೊಂದಕ್ಕೆ ಸರಾಸರಿ 10 ಇಂಚಿನಷ್ಟು ಮಳೆ ಸುರಿದಿದ್ದು, ಇಂದಿಗೂ ಮಳೆಯಾಗುತ್ತಿರುವ ಶಾಂತಳ್ಳಿ ಭಾಗದಲ್ಲಿ ಈಗಾಗಲೇ ಹಲವಷ್ಟು ಕೃಷಿ ಹಾನಿಯಾಗಿದೆ. ಇದರೊಂದಿಗೆ ವಾಸದ ಮನೆಗಳಿಗೂ ಹಾನಿಯಾಗುತ್ತಿದ್ದು, ಬಸವನಕಟ್ಟೆ ಗ್ರಾಮದ ಅಣ್ಣಪ್ಪ ಅವರ ಮನೆ ಸಂಪೂರ್ಣ ಕುಸಿದು ಬಿದ್ದಿದೆ.
ಮನೆಯ ಗೋಡೆಗಳು ಕುಸಿದ ಹಿನ್ನೆಲೆ ಛಾವಣಿ ಧರಾಶಾಹಿಯಾಗಿದ್ದು, ಸದ್ಯ ಕುಟುಂಬ ತಾತ್ಕಾಲಿಕ ಶೆಡ್ನಲ್ಲಿ ದಿನದೂಡುತ್ತಿದೆ. ಬಸವನಕಟ್ಟೆ ಗ್ರಾಮವನ್ನು ಸೀಲ್ಡೌನ್ ಮಾಡಿರುವ ಹಿನ್ನೆಲೆ ಈ ಕುಟುಂಬ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ.