ನಾಪೆÇೀಕ್ಲು, ಆ. 14: ಮರದಲ್ಲಿರಿಸಿದ್ದ ಏಣಿ ತೆಗೆಯುವ ಸಂದರ್ಭ ಏಣಿ ಸಮೀಪದಲ್ಲಿದ್ದ ವಿದ್ಯುತ್ ತಂತಿಗೆ ಸ್ಪರ್ಶಿಸಿ ವ್ಯಕ್ತಿಯೋರ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಾಪೆÇೀಕ್ಲು ಗ್ರಾಮ ಪಂಚಾಯಿತಿಗೆ ಒಳಪಟ್ಟ ಅಜ್ಜಿಮುಟ್ಟ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕಂಗಾಂಡ ನಂದಾ ಬೆಳ್ಯಪ್ಪ (63) ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ದುರ್ದೈವಿ. ಸೆಸ್ಕ್ ಸಿಬ್ಬಂದಿಗಳು ವಿದ್ಯುತ್ ಲೈನ್ ದುರಸ್ತಿ ಪಡಿಸುವ ಸಂದರ್ಭದಲ್ಲಿ ನಂದಾ ಅವರಿಂದ ಏಣಿಯನ್ನು ಪಡೆದು ಮರದ ಕೊಂಬೆಗಳನ್ನು ಕತ್ತರಿಸಿದ್ದರು. ನಂತರ ಅವರು ವಾಪಾಸು ತೆರಳಿ ವಿದ್ಯುತ್ ಸಂಪರ್ಕ ನೀಡಿದ್ದರು. ನಂದ ಅವರು ಏಣಿ ತೆಗೆಯುವ ಸಂದರ್ಭ ಏಣಿ ವಿದ್ಯುತ್ ತಂತಿಗೆ ತಗುಲಿ ಈ ದುರ್ಘಟನೆ ನಡೆದಿದೆ. ಈ ಬಗ್ಗೆ ನಾಪೆÇೀಕ್ಲು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.