ನಾಪೆÇೀಕ್ಲು, ಆ. 14: ಸ್ಥಳೀಯ ಶ್ರೀ ಭಗವತಿ ದೇವಾಲಯದ ಬಳಿಯಲ್ಲಿ ಹಾದು ಹೋಗಿರುವ ವಿದ್ಯುತ್ ಮಾರ್ಗದ ಸಮೀಪ ಎರಡು ಸಿಲ್ವರ್ ಮರಗಳು ವಿದ್ಯುತ್ ತಂತಿಗೆ ತಗಲುತ್ತಿದ್ದು, ಗಾಳಿ-ಮಳೆಗೆ ಮರ ಬೀಳುವ ಸ್ಥಿತಿಯಲ್ಲಿದೆ. ಕೂಡಲೇ ಈ ಮರಗಳನ್ನು ಕಡಿದು ಅಪಾಯವನ್ನು ತಪ್ಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಭಗವತಿ ದೇವಾಲಯದ ಅರ್ಚಕ ಹರೀಶ್ ಭಟ್ ಚೆಸ್ಕಾಂಗೆ ಮನವಿ ಮಾಡಿದ್ದಾರೆ.