ನಾಪೋಕ್ಲು, ಆ. 14: ಪ್ರವಾಹದಿಂದಾಗಿ ಹಲವು ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ವಿವಿಧೆಡೆ ಭತ್ತದ ನಾಟಿ ಕೆಲಸ ಪೂರ್ಣಗೊಳಿಸಿದ್ದು, ಪ್ರವಾಹದಿಂದಾಗಿ ಭತ್ತದ ಗದ್ದೆಗಳಲ್ಲಿ ಮಣ್ಣು ತುಂಬಿ ಪೈರು ನಾಶವಾಗಿವೆ.

ಸಮೀಪದ ಚೆಯ್ಯಂಡಾಣೆ ನರಿಯಂದಡ ಗ್ರಾಮಪಂಚಾಯಿತಿಗೆ ಸೇರಿದ ನರಿಯಂದಡ - ಎಡಪಾಲ ಕ್ಷೇತ್ರದ ರಮೇಶ್‍ಬಿದ್ದಪ್ಪ, ಶಂಭು, ದಿನೇಶ್, ಹಾಗೂ ಪಾಲಚಂಡ ಕಿರಣ್, ಪೂವಮ್ಮ ಎಂಬವರಿಗೆ ಸೇರಿದ ಸುಮಾರು 3ಎಕರೆ ಗದ್ದೆಗಳು ಸಂಪೂರ್ಣವಾಗಿ ನಾಶವಾಗಿವೆ. ಸ್ಥಳಕ್ಕೆ ಜಿಲ್ಲಾಪಂಚಾಯಿತಿ ಸದಸ್ಯ ನೆಲ್ಲಚಂಡ ಕಿರಣ್‍ಕಾರ್ಯಪ್ಪ, ತೆರಳಿ ಸ್ಥಳ ಪರಿಶೀಲನೆ ನಡೆಸಿ ಕಂದಾಯ ಇಲಾಖೆಯಿಂದ ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಡಿಕೇರಿ ತಾಲೂಕು ಬಿಜೆಪಿ ಪ್ರಧಾನಕಾರ್ಯದರ್ಶಿ ಕೋಡಿರ ಪ್ರಸನ್ನ ತಮ್ಮಯ್ಯ, ಚೆಯ್ಯಂಡಾಣೆ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಪೊಕ್ಕುಳಂಡ್ರ ಧನೋಜ್ ಮತ್ತಿತರರು ಇದ್ದರು.