ಮಡಿಕೇರಿ, ಆ. 13: ಸುಂಟಿಕೊಪ್ಪ ಮಹಾಲಕ್ಷ್ಮೀ ತೋಟದಲ್ಲಿ 3 ಆನೆಗಳು ವಾಸ್ತವ್ಯ ಹೂಡಿದ್ದು, ಸುಮಾರು 170 ಎಕರೆ ವಿಸ್ತೀರ್ಣ ತೋಟದಲ್ಲಿ ಅಲೆದಾಡುತ್ತಾ ಹಾನಿ ಉಂಟು ಮಾಡುತ್ತಿವೆ. ಹಲವು ದಿನಗಳಿಂದ 3 ಆನೆಗಳು ತೋಟದಲ್ಲೆ ನೆಲೆಸಿದ್ದು, ತಾ. 8 ರಂದು ತೋಟದ ಮಾಲೀಕ ಅಪ್ಪಯ್ಯ ಅವರು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ಇಲಾಖೆಯ ಸಿಬ್ಬಂದಿ ಆನೆ ಓಡಿಸುವ ಕಾರ್ಯಾಚರಣಕ್ಕೆ ಸಿದ್ಧವಾಗಿ ಬಂದು, ಆನೆ ಸಿಗದೆ ಹಿಂತೆರಳಿದ್ದಾರೆ. ಈ ಕುರಿತು ತಾ. 9 ರಂದು ‘ಶಕ್ತಿ’ಯಲ್ಲಿ ವರದಿ ಕೂಡ ಪ್ರಕಟವಾಗಿತ್ತು. ಬಳಿಕ ಪುನಃ ಸಿಬ್ಬಂದಿ ತೋಟಕ್ಕೆ ಆಗಮಿಸಿದ್ದಾರೆ. ಈ ಸಂದರ್ಭ 1 ಆನೆ ಗೋಚರಿಸಿದ್ದು, ಇದನ್ನು ಕಾಡಿಗೆ ಅಟ್ಟಿಸುವ ಸಲುವಾಗಿ ಪಟಾಕಿಯನ್ನು ಸಿಡಿಸಿದ್ದಾರೆ. ಪಟಾಕಿ ಸಿಡಿಸಿದರೂ ಆನೆ ನಿಂತ ಜಾಗದಿಂದ ತೆರಳಲಿಲ್ಲ. ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ‘ಪಟಾಕಿ ಸಿಡಿಸಿದರೂ ಆನೆ ಓಡಲಿಲ್ಲ, ಬಹುಶ ಆನೆಗೆ ಕಿವಿ ಕೇಳುವುದಿಲ್ಲ’ ಎಂದು ಹೇಳಿ ಹಿಂತೆರಳಿರುವುದಾಗಿ ಮಾಲೀಕ ಅಪ್ಪಯ್ಯ ‘ಶಕ್ತಿ’ಗೆ ತಿಳಿಸಿದ್ದಾರೆ.