ಕೂಡಿಗೆ, ಆ. 12 : ಕಾವೇರಿ ನೀರಾವರಿ ನಿಗಮ ಹಾರಂಗಿ ವಿಭಾಗದ ಸೋಮವಾರಪೇಟೆ ಏತ ನೀರಾವರಿ ಯೋಜನೆ ಅಡಿಯ ಕಣಿವೆ ಸಮೀಪದ ಕಲ್ಲುಕರೆ ಹತ್ತಿರ ಹಾರಂಗಿ ಎಡದಂಡೆ ನಾಲೆಗೆ ಅಳವಡಿಸಿರುವ ಪೈಪ್ಗಳ ಮೂಲಕ ನಾಲೆಯಿಂದ ನೀರೆತ್ತಿ ಬೇಸಾಯಕ್ಕೆ ನೀರನ್ನು ಕಾಲುವೆಗಳ ಹರಿಸುವಿಕೆಗೆ ಹಾರಂಗಿ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ. ಮಹೇಂದ್ರ ಕುಮಾರ್ ಚಾಲನೆ ನೀಡಿದರು.
ಈ ಏತ ನೀರಾವರಿ ಯೋಜನೆಯು 12,20, ಕಿಲೋಮೀಟರ್ ಉದ್ದವಾಗಿದ್ದು, ಇದರಲ್ಲಿ ಚಿನೇನಹಳ್ಳಿ, ದೊಡ್ಡ ಅಳುವಾರ, 6ನೇ ಹೊಸಕೋಟೆ. ಅಂದಾನಿಪುರ, ಹಳೇಕೋಟೆ ಸೇರಿದಂತೆ ಎಂಟು ಗ್ರಾಮಗಳಿಗೆ ಬೇಸಾಯ ಮಾಡಲು ಕಾಲುವೆಗಳ ಮೂಲಕ ನೀರನ್ನು ಹರಿಸಲಾಗುತ್ತಿದೆ.
ಸೋಮವಾರಪೇಟೆ ಏತ ನೀರಾವರಿ ಪ್ರದೇಶದ ರೈತರು ಈ ಭಾಗಗಳಲ್ಲಿ ಉಪ ಖಾರಿಪ್ ಬೆಳೆಗಳನ್ನು ಬೆಳೆದಿದ್ದು, ಅವುಗಳ ಕಟಾವು ಮಾಡಿ ಭತ್ತ ನಾಟಿ ಕಾರ್ಯ ಅರಂಭ ಸಿದ್ಧರಾಗುತ್ತಿದ್ದಾರೆ.
ಈ ಸಂದರ್ಭದಲ್ಲಿ ವಿದ್ಯುತ್ ಯಂತ್ರ ನಿರ್ವಹಣೆಯ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ವರ್ಗ ಸೇರಿದಂತೆ ರೈತರು ಇದ್ದರು.