ಕೂಡಿಗೆ, ಆ. 13: ಕಾವೇರಿ ನೀರಾವರಿ ನಿಗಮದ ಅಧೀನದ ಹಾರಂಗಿ ನೀರಾವರಿ ಇಲಾಖೆಗೆ ಸೇರಿದ. ಹಾರಂಗಿ ಮತ್ತು ಚಿಕ್ಲಿಹೊಳೆ ಜಲಾಶಯದ ಕಚೇರಿಗಳು ಪಾಳುಬಿದ್ದಿರುವ ಕಟ್ಟಡಗಳನ್ನು ದುರಸ್ತಿ ಮಾಡಲು ಅದರ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಲು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸೂಚನೆ ನೀಡಿದ್ದಾರೆ.
ಹಾರಂಗಿ ಮತ್ತು ಚಿಕ್ಲಿಹೊಳೆ ಜಲಾಶಯ ವ್ಯಾಪ್ತಿಯ ಅನೇಕ ಕಚೇರಿಗಳು ಬೀಳುವ ಹಂತವನ್ನು ತಲುಪಿದ್ದು, ಈ ಭಾಗಗಳಿಗೆ ಶಾಸಕ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿಕ್ಲಿಹೊಳೆ ಜಲಾಶಯಕ್ಕೆ ಹೊಂದಿರುವ ಹತ್ತು ಕಚೇರಿಗಳು ಪಾಳುಬಿದ್ದು ಹಾಳಾಗುವ ಬದಲು ಅವುಗಳನ್ನು ದುರಸ್ತಿ ಮಾಡಿ ಸರಕಾರಿ ನೌಕರರಿಗೆ ಬಾಡಿಗೆ ರೂಪದಲ್ಲಿ ನೀಡಬಹುದಾಗಿದೆ. ಇದರಿಂದ ಈ ವ್ಯಾಪ್ತಿಯ ಸರಕಾರಿ ನೌಕರರಿಗೆ ಅನುಕೂಲವಾಗುವುದು. ಈಗಾಗಲೇ ಇಲ್ಲಿನ ಕಚೇರಿಗಳು ಕುಶಾಲನಗರ ಮತ್ತು ಹಾರಂಗಿಯಲ್ಲಿ ಇರುವುದರಿಂದ ದುರಸ್ತಿಗೆ ಕ್ರಿಯಾ ಯೋಜನೆ ತಯಾರಿಸಿಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಇದೆ ಮಾದರಿಯಲ್ಲಿ ಹಾರಂಗಿಯಲ್ಲಿರುವ ಕಟ್ಟಡಗಳನ್ನೂ ದುರಸ್ತಿಪಡಿಸಿ ಕುಶಾಲನಗರದ ಕಚೇರಿಗಳನ್ನು ಸ್ಥಳಾಂತರಿಸಲು ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಂಜನ್ ಭರವಸೆ ನೀಡಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾ ಬಿ.ಜೆಪಿ. ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಮನುಕುಮಾರ್ ರೈ, ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರಕುಮಾರ್, ತಾಲೂಕು ಬಿ.ಜೆ.ಪಿ. ಮಂಡಲ ಕಾರ್ಯದರ್ಶಿ ಉಪಾಧ್ಯಕ್ಷ ರಮೇಶ್ ಕೃಷ್ಣಪ್ಪ, ಪ್ರಾಧಿಕಾರದ ನಿರ್ದೇಶಕ ವೈಶಾಕ್ ಸೇರಿದಂತೆ ವಿವಿಧ ಘಟಕಗಳ ಪÀದಾಧಿಕಾರಿಗಳು ಹಾಗೂ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ. ಚಂದ್ರು, ಗ್ರಾಮ ಲೆಕ್ಕಾಧಿಕಾರಿ ಹಾಜರಿದ್ದರು.