ಕಣಿವೆ, ಆ. 12 : ಮಡಿಕೇರಿ ಮೈಸೂರು ರಾಜ್ಯ ಹೆದ್ದಾರಿಯ ಆನೆಕಾಡು ಅರಣ್ಯದ ಬಳಿ ರಸ್ತೆ ಬದಿಯ ಅರಣ್ಯದಂಚಿನಲ್ಲಿ ಕಾಡಾನೆಯೊಂದು ನಿಂತು ಹೆದ್ದಾರಿಯಲ್ಲಿ ಸಾಗುವವರನ್ನು ನೋಡುತ್ತ ತನ್ನದೇ ಆದ ನೋಟ ಬೀರಿ ದರ್ಶನ ನೀಡಿತು. ಬುಧವಾರ ಬೆಳಿಗ್ಗೆ 11 ಗಂಟೆಯ ಸುಮಾರಿನಲ್ಲಿ ಗಜಗಾಂಭೀರ್ಯ ದೊಂದಿಗೆ ಕಂಡ ಕಾಡಾನೆ, ಏನಾದರೂ
(ಮೊದಲ ಪುಟದಿಂದ) ಬಾಯಾರಿಕೆಯಿಂದ ಬಳಲಿ ಹೆದ್ದಾರಿಯಂಚಿನಲ್ಲಿರುವ ಕೆರೆಯ ನೀರು ಕುಡಿಯಲು ಧಾವಿಸಿ ಬಂದಿರುವ ಸಾಧ್ಯತೆಯೂ ಇರಬಹುದು ಎಂದು ಅರಣ್ಯಾಧಿಕಾರಿ ತಿಳಿಸಿದರು. ಸರಿ ಸುಮಾರು 20 ನಿಮಿಷಗಳ ಕಾಲ ಅಲ್ಲೇ ನಿಂತ ಈ ಕಾಡಾನೆ, ಹೆದ್ದಾರಿಯಲ್ಲಿ ಸಾಗುವ ವಾಹನಗಳ ಶಬ್ಧವನ್ನು ಆಲಿಸುತ್ತಾ ವಾಹನ ಸವಾರರಿಗೆ ದರ್ಶನ ನೀಡಿತು. ಕೆಲವರು ತಮ್ಮ ಮೊಬೈಲ್ಗಳಿಂದ ಪೆÇೀಟೋ ಕ್ಲಿಕ್ಕಿಸುವ ಸಾಹಸವನ್ನು ಕೂಡ ತೋರುತ್ತಿದ್ದರು. ಕೊನೆಗೆ ಈ ಕಾಡಾನೆ ನಿಮ್ಮ ಸಹವಾಸವೇ ಬೇಡ. ಬಂದ ದಾರಿಯಲ್ಲೇ ಹಿಂದಿರುಗುವೆ ಎಂದುಕೊಂಡು ಹಿಂದೆ ತೆರಳಿತು.