ಕುಶಾಲನಗರ, ಆ. 12: ಸಮೀಪದ ಹಾರಂಗಿ ಜಲಾಶಯಕ್ಕೆ ಈ ಮಳೆಗಾಲ ಅವಧಿಯಲ್ಲಿ ಇದುವರೆಗೆ ಒಟ್ಟು 12.24 ಟಿಎಂಸಿ ಪ್ರಮಾಣದ ನೀರು ಹರಿದುಬಂದಿದೆ. ನದಿಗೆ 7.60 ಟಿಎಂಸಿ ಪ್ರಮಾಣದ ನೀರು ಹರಿಸಲಾಗಿದೆ. ಪ್ರಸಕ್ತ ಜಲಾಶಯದಲ್ಲಿ 7.61 ಟಿಎಂಸಿ ನೀರಿನ ಸಂಗ್ರಹವಿರುವುದಾಗಿ ಹಾರಂಗಿ ಅಣೆಕಟ್ಟೆ ಅಧಿಕಾರಿ ನಾಗರಾಜ್ ತಿಳಿಸಿದ್ದಾರೆ.
ನಾಲೆ ಮೂಲಕ 0.4 ಟಿಎಂಸಿ ನೀರು ಹರಿದಿದೆ. ಈ ಬಾರಿ ಹಾರಂಗಿ ನದಿ ಪಾತ್ರದಲ್ಲಿ ಹೆಚ್ಚಿನ ಮಳೆಯಾಗಿಲ್ಲ. ಪ್ರವಾಹ ತಡೆಗಟ್ಟುವ ಹಿನ್ನಲೆಯಲ್ಲಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಮತ್ತು ಜಿಲ್ಲಾಡಳಿತದ ಸೂಚನೆಯಂತೆ ಹಂತ ಹಂತವಾಗಿ ನದಿ ನೀರು ಹರಿಸಲಾ ಗಿತ್ತು. ಪ್ರಸಕ್ತ ಜಲಾಶಯಕ್ಕೆ 5583 ಕ್ಯೂಸೆಕ್ ಪ್ರಮಾಣದ ನೀರು ಹರಿದು ಬರುತ್ತಿದ್ದು ನದಿಗೆ 5436 ಕ್ಯೂಸೆಕ್ ಹರಿಸಲಾಗುತ್ತಿದೆ. ಕಾಲುವೆಗೆ 200 ಕ್ಯೂಸೆಕ್ ಬಿಡುಗಡೆಗೊಳಿಸಲಾಗಿದೆ.