ನಾಪೆÇೀಕ್ಲು, ಆ. 12: ಸ್ಥಳಿಯ ಮಾದರಿ ಪ್ರಾಥಮಿಕ ಶಾಲೆಯ ಕಟ್ಟಡವು ಭಾರೀ ಮಳೆಯಿಂದಾಗಿ ಕುಸಿದು ಬಿದ್ದು ಮರ ಮುಟ್ಟುಗಳು ಹೆಂಚುಗಳೂ ಪುಡಿ ಪುಡಿಯಾಗಿ ಅಪಾರ ನಷ್ಟ ಸಂಭವಿಸಿದ್ದು ಇದಕ್ಕೆ ಶಿಕ್ಷಣಾ ಇಲಾಖೆಯ ಅಧಿಕಾರಿಗಳು ಮತ್ತು ಶಾಲಾ ಶಿಕ್ಷಕರು ನೇರ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ. ಮುಖ್ಯ ರಸ್ತೆಯಿಂದ ಕೆಳಗಿನ ಭಾಗದಲ್ಲಿರುವ ಈ ಶಾಲಾ ಕಟ್ಟಡವು 2018ರ ಮಹಾ ಮಳೆಗೆ ಕುಸಿದು ಬಿದ್ದಿದ್ದು, ಈವರೆಗೂ ಅದನ್ನು ಸರಿಪಡಿಸದೇ ಇಲಾಖೆ ನಿರ್ಲಕ್ಷ್ಯ ತಾಳಿರುವುದರಿಂದ ಇಂದು ಶಾಲೆಯ ಇತರ ಭಾಗ ಕುಸಿಯಲು ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.

ನಾಪೆÇೀಕ್ಲು ಮಾದರಿ ಪ್ರಾಥಮಿಕ ಶಾಲೆಯು 1871ರಲ್ಲಿ ಇಲ್ಲಿನ ವಿದ್ಯಾಭಿಮಾನಿಗಳ ಸಹಕಾರದೊಂದಿಗೆ ಪ್ರಾರಂಭವಾಯಿತು. ಅಂದು ಕೊಡಗಿನಲ್ಲಿ ಕೇವಲ ಮೂರು ಶಾಲೆಗಳು ಮಾತ್ರ ಇದ್ದವು. ಮಡಿಕೇರಿಯಲ್ಲಿ ಮತ್ತು ಪೊನ್ನಂಪೇಟೆಯಲ್ಲಿ ಮಾತ್ರ ಶಾಲೆಗಳು ಇದ್ದವು. ಈ ಶಾಲೆಯಲ್ಲಿ ಮಾಜಿ ಮಂತ್ರಿಗಳಾದ ಅಪ್ಪನೆರವಂಡ ಬೆಳ್ಯಪ್ಪ, ಮೇರಿಯಂಡ ನಾಣಯ್ಯ, ಮುಂಡಂಡ ನಾಣಯ್ಯ ಮೊದಲಾದವರಿದ್ದು, ಇನ್ನಾದರು ಬಾಕಿ ಉಳಿದಿರುವ ಕಟ್ಟಡವನ್ನು ಕಾಪಾಡಬೇಕೆಂದು ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ಅಗ್ರಹಿಸಿದ್ದಾರೆ.