ಮರಗೋಡು ಐಕೊಳ ಗ್ರಾಮ ನಿವಾಸಿ, ದಿ. ಕೊಂಪೊಳೀರ ಆನಂದ ಅವರ ಪುತ್ರ, ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದ ನಿವೃತ್ತ ನೌಕರ ಬೋಪಯ್ಯ (ಮಿಟ್ಟು-64) ಅವರು ತಾ. 12 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 13 ರಂದು (ಇಂದು) ಮಧ್ಯಾಹ್ನ ಸ್ವಗ್ರಾಮದಲ್ಲಿ ನೆರವೇರಲಿದೆ. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.
*ಮೂಲತಃ ಜಿಲ್ಲೆಯವರಾದ ಪಿರಿಯಾಪಟ್ಟಣದ ಲಿಂಗಪುರ ಮುತ್ತೂರು ಗ್ರಾಮದಲ್ಲಿ ನೆಲೆಸಿದ್ದ ಕುಯ್ಯಮುಡಿ ಕುಟುಂಬದ ಪಟ್ಟೆದಾರ ಪೆÇನ್ನಪ್ಪ ಅವರ ಪತ್ನಿ ಚಂದ್ರಮ್ಮ (90) ತಾ. 12ರಂದು ನಿಧನರಾದರು. ಮೃತರು 2 ಗಂಡು ಮತ್ತು 3 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ.13 ರಂದು (ಇಂದು) ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.