ಗೋಣಿಕೊಪ್ಪಲು, ಆ. 12: ಗೋಣಿಕೊಪ್ಪ ಚೆಸ್ಕಾಂ ಇಲಾಖೆಯ ವಸತಿ ಗೃಹದಲ್ಲಿರುವ ಓರ್ವ ವ್ಯಕ್ತಿಗೆ ಕೊರೊನಾ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಪೆÇನ್ನಂಪೇಟೆ ಕಂದಾಯ ಇಲಾಖೆಯ ಅಧಿಕಾರಿಗಳಾದ ರಾಧಕೃಷ್ಣ ವಸತಿ ಗೃಹದ ಸುತ್ತಲಿನ ಪ್ರದೇಶವನ್ನು ಸೀಲ್‍ಡೌನ್ ಗೊಳಿಸಿದರು.
ಈ ಸಂದರ್ಭ ಪಂಚಾಯಿತಿ ಪಿಡಿಒ ಶ್ರೀನಿವಾಸ್, ಕಂದಾಯ ಇಲಾಖೆಯ ಮಂಜುನಾಥ್, ಯಶವಂತ್, ಸುನೀಲ್, ಪಂಚಾಯಿತಿ ಸಿಬ್ಬಂದಿಗಳಾದ ಸುಬ್ರಹ್ಮಣ್ಯ, ರಾಜು, ನವೀನ್, ಸತೀಶ್ ಮುಂತಾದವರು ಹಾಜರಿದ್ದರು.
ಅರುವತ್ತೊಕ್ಕಲು ಸೀಲ್ ಡೌನ್
ಗೋಣಿಕೊಪ್ಪಲು: ಗೋಣಿಕೊಪ್ಪ ಸಮೀಪದ ಅರುವತ್ತೊಕ್ಕಲು ಪಂಚಾಯಿತಿ ವ್ಯಾಪ್ತಿಯ ಮೈಸೂರಮ್ಮ ನಗರದ ಒಂದು ಭಾಗದಲ್ಲಿ ಓರ್ವ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಸರಕಾರದ ನಿಯಮದಂತೆ ಪೆÇನ್ನಂಪೇಟೆ ಕಂದಾಯ ಇಲಾಖೆಯ ಅಧಿಕಾರಿ ಗಳಾದ ರಾಧಕೃಷ್ಣ ಅವರು ಸ್ಥಳಕ್ಕೆ ತೆರಳಿ ಒಂದು ಪ್ರದೇಶವನ್ನು ನಿಬರ್ಂಧಿತ ಪ್ರದೇಶವೆಂದು ಘೋಷಿಸಿ, ಯಾರೂ ಕೂಡಾ ಒಳ ಹಾಗೂ ಹೊರ ಹೋಗುವ ಪ್ರಯತ್ನ ಮಾಡಬಾರದು ಹಾಗೂ ಸರಕಾರದ ನಿಯಮಗಳನ್ನು ತಪ್ಪದೇ ಪಾಲಿಸುವಂತೆ ಸೂಚನೆ ನೀಡಿದರು. ಈ ಸಂದರ್ಭ ಪಂಚಾಯಿತಿ ಪಿಡಿಒ, ಕಂದಾಯ ಇಲಾಖೆಯ ಮಂಜುನಾಥ್, ಯಶವಂತ್, ಸುಚಿತ್ರ, ಸುನಿಲ್, ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ ಸೇರಿದಂತೆ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.