ಕೂಡಿಗೆ, ಆ. 11: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆ ದಾಳಿಯಿಟ್ಟು ಮೂರು ಎಕರೆಗಳಷ್ಟು ಪ್ರದೇಶದ ಜೋಳದ ಬೆಳೆಯನ್ನು ತಿಂದು ತುಳಿದು ಸಂಪೂರ್ಣ ನಷ್ಟಪಡಿಸಿವೆ. ಆನೆಕಾಡಿನ ಪ್ರದೇಶದಿಂದ ಬೆಂಡೆಬೆಟ್ಟ ಮೂಲಕ ಹುದುಗೂರು ವ್ಯಾಪ್ತಿಯಲ್ಲಿದ್ದ 9 ಕಾಡಾನೆಗಳು ಮತ್ತು ಎರಡು ಮರಿ ಆನೆಗಳು ಗ್ರಾಮಕ್ಕೆ ನುಸುಳಿ ಬೆಳೆ ಹಾನಿಮಾಡಿರುತ್ತವೆ.

ದೊಡ್ಡತ್ತೂರು ಗ್ರಾಮದ ಕೃಷ್ಣ ಎಂಬವರಿಗೆ ಸೇರಿದ ಮೂರು ಎಕರೆ ಪ್ರದೇಶದ ಜೋಳದ ಬೆಳೆಯನ್ನು ನಾಶಪಡಿಸಿವೆ. ಅಲ್ಲದೆ ಈ ಭಾಗದ ಕೆಸ, ಕೇನೆ, ಬಾಳೆ ಬೆಳೆಗಳನ್ನು ನಷ್ಟಪಡಿಸಿವೆ. - ಕೆ.ಕೆ.ಎನ್. ಶೆಟ್ಟಿ