ಮಡಿಕೇರಿ, ಆ.11 : 2019-20ನೇ ಸಾಲಿನಲ್ಲಿ ಕೊಡಗಿನಲ್ಲಿ ಒಟ್ಟು 6499 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ನೊಂದಣಿಯಾಗಿದ್ದು, ಇವರಲ್ಲಿ 6255 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 5054 ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದು, ಶೇ.81 ಫಲಿತಾಂಶ ಬಂದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕÀ ಪಿ.ಎಸ್.ಮಚ್ಚಾಡೊ ತಿಳಿಸಿದ್ದಾರೆ. ಗೈರು ಮತ್ತು ಹಾಜರಾತಿ ಕೊರತೆಯಿಂದ 244 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲ. ಇಲಾಖೆಯು ನಿಗದಿಪಡಿಸಿರುವ ಹೊಸ ಮಾನದಂಡದ ಪ್ರಕಾರ ಜಿಲ್ಲೆಯ ಫಲಿತಾಂಶ ‘ಬಿ’ ಶ್ರೇಣಿ ಪಡೆದಿದೆ ಎಂದು ಅವರು ಹೇಳಿದ್ದಾರೆ. ತಾಲೂಕುವಾರು ಮಾಹಿತಿ ಇಂತಿದೆ : ಮಡಿಕೇರಿ ತಾಲೂಕಿನ 43 ಶಾಲೆಗಳಲ್ಲಿ 1808 ವಿದ್ಯಾರ್ಥಿಗಳು ಹಾಜರಾಗಿದ್ದು, 1476 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.81.64 ಫಲಿತಾಂಶ ಬಂದಿದೆ. ಸೋಮವಾರಪೇಟೆ ತಾಲೂಕಿನ 64 ಶಾಲೆಗಳ 2482 ವಿದ್ಯಾರ್ಥಿಗಳು ಹಾಜರಾಗಿದ್ದು, 1953 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.78.68 ಫಲಿತಾಂಶ ಬಂದಿದೆ.
ವೀರಾಜಪೇಟೆ ತಾಲೂಕಿನ 57 ಶಾಲೆಗಳ 1965 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 1625 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 82.70 ಫಲಿತಾಂಶ ಬಂದಿದೆ.
ಶ್ರೇಣಿವಾರು ಫಲಿತಾಂಶ ವಿವರ : ಮಡಿಕೇರಿ ತಾಲೂಕಿನ 43 ಶಾಲೆಗಳಲ್ಲಿ 22 ಶಾಲೆಗಳು ‘ಎ’ ಶ್ರೇಣಿ, 7 ಶಾಲೆಗಳು ‘ಬಿ’ ಶ್ರೇಣಿ, 14 ಶಾಲೆಗಳು ‘ಸಿ’ ಶ್ರೇಣಿ ಪಡೆದಿವೆ. ಸೋಮವಾರಪೇಟೆ ತಾಲೂಕಿನ 64 ಶಾಲೆಗಳಲ್ಲಿ 23 ಶಾಲೆಗಳು ‘ಎ’ ಶ್ರೇಣಿ, 17 ಶಾಲೆಗಳು ‘ಬಿ’ ಶ್ರೇಣಿ, 24 ಶಾಲೆಗಳು ‘ಸಿ’ ಶ್ರೇಣಿ ಪಡೆದಿವೆ.
(ಮೊದಲ ಪುಟದಿಂದ) ವೀರಾಜಪೇಟೆ ತಾಲೂಕಿನ 57 ಶಾಲೆಗಳಲ್ಲಿ 21 ಶಾಲೆಗಳು ‘ಎ’ ಶ್ರೇಣಿ, 19 ಶಾಲೆಗಳು ‘ಬಿ’ ಶ್ರೇಣಿ, 17 ಶಾಲೆಗಳು ‘ಸಿ’ ಶ್ರೇಣಿ ಪಡೆದಿವೆ.
ಪರೀಕ್ಷೆ ಬರೆಯಲಾಗದ ಮತ್ತು ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಪೂರಕ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ನೋಂದಣಿ ಮತ್ತು ಮೌಲ್ಯಮಾಪನ ಸಂಬಂಧಿಸಿದ ಮಾಹಿತಿಗೆ ಆಯಾಯ ಪ್ರೌಢಶಾಲೆಯ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಬಹುದು ಎಂದು ಮಚ್ಚಾಡೋ ತಿಳಿಸಿದ್ದಾರೆ.
(ಮೊದಲ ಪುಟದಿಂದ)
ಐಎಎಸ್ ಮಾಡುವ ಗುರಿ: ಗಾನಾ
ವಿಜ್ಞಾನ ವಿಷಯದಲ್ಲಿ ವಿದ್ಯಾಭ್ಯಾಸ ಮುಂದುವರೆಸಿ ಭವಿಷ್ಯದಲ್ಲಿ ಐಎಎಸ್ ಮಾಡುವ ಬಯಕೆ ಹೊಂದಿರುವುದಾಗಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ಸೋಮವಾರಪೇಟೆ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಎಸ್. ಗಾನಾ (618) ತಿಳಿಸಿದ್ದಾರೆ. ಗಾನಾ ಸೋಮವಾರಪೇಟೆ ಎಂ.ಡಿ. ಬ್ಲಾಕ್‍ನ ಖಾಸಗಿ ಉದ್ಯೋಗಿ ಸುಜಿತ್ ಮತ್ತು ಸೀಮಾ ದಂಪತಿಯ ಪುತ್ರಿ.
ಪಿಸಿಎಂಬಿ ಮಾಡುವೆ: ಅನುಷಾ
ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ ವಿಷಯಗಳಲ್ಲಿ ಓದಿ ಸಾಧನೆ ಮಾಡುವ ಗುರಿ ಹೊಂದಿದ್ದೇನೆ ಎಂದು ಜಿಲ್ಲೆಗೆ ತೃತೀಯ ಸ್ಥಾನ ಪಡೆದ ಗೋಣಿಕೊಪ್ಪ ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ.ಎಸ್. ಅನುಷಾ ಪೊನ್ನಮ್ಮ (617) ಹೇಳಿದ್ದಾರೆ. ಇವರು ಗೋಣಿಕೊಪ್ಪಲು ವಿದ್ಯಾನಿಕೇತನ ಕಾಲೇಜಿನ ಉಪನ್ಯಾಸಕರಾದ ಕೆ.ಎಂ. ಸುನಿಲ್ ಮತ್ತು ಬಿ.ಎ. ತಾರಾ ದಂಪತಿಯ ಪುತ್ರಿ.