ಸೋಮವಾರಪೇಟೆ, ಆ. 11: ಆರಂಭದಿಂದಲೂ ಆರ್ಭಟಿಸಿದ ಆಶ್ಲೇಷ ಮಳೆಯಿಂದಾಗಿ ಸೋಮವಾರಪೇಟೆ ವ್ಯಾಪ್ತಿಯ ಬಹುತೇಕ ಕೆರೆಗಳು ಭರ್ತಿಯಾಗಿವೆ.
ಪಟ್ಟಣದಲ್ಲಿರುವ ಆನೆಕೆರೆಯಲ್ಲಿ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದರೆ, ದೊಡ್ಡಮಳ್ತೆ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಹೊನ್ನಮ್ಮನ ಕೆರೆ ಭರ್ತಿಯಾಗಿದೆ. ಇದರೊಂದಿಗೆ ಚೌಡ್ಲು ಗ್ರಾಮದ ಚೌಡ್ಲಯ್ಯ-ಮೂಡ್ಲಯ್ಯ ದೇವಾಲಯದ ಬಳಿಯಿರುವ ಚೌಡ್ಲು ಕೆರೆ ಭರ್ತಿಯಾಗಿದ್ದರೆ, ಯಡೂರು ಗ್ರಾಮದ ದೇವರ ಕೆರೆ ತುಂಬಿದೆ.
ಶಾಂತಳ್ಳಿಯ ಗೌರಿ ಕೆರೆ, ಗಣಗೂರು ಕೆರೆ, ಕೂಗೇಕೋಡಿ ಕೆರೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. 5 ದಿನಗಳ ಕಾಲ ಆರ್ಭಟಿಸಿದ ಮಳೆಗೆ ಬಹುತೇಕ ಖಾಸಗಿ ಕೆರೆಗಳೂ ಭರ್ತಿಯಾಗಿದ್ದು, ಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.