ಸುಂಟಿಕೊಪ್ಪ, ಆ. 10: ಇಲ್ಲಿನ ಮೂರನೇ ವಿಭಾಗದ ಅಪ್ಪಾರಂಡ ಬಡಾವಣೆಯ 9 ವರ್ಷದ ಬಾಲಕಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಕಂದಾಯ ಪರಿವೀಕ್ಷಕ ಶಿವಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಡಾ. ಜೀವನ್, ಕಿರಿಯ ಆರೋಗ್ಯ ಸಹಾಯಕ ಚಂದ್ರೇಶ್ ಅಪ್ಪಾರಂಡ ಬಡಾವಣೆಗೆ ತೆರಳಿ 21 ಮನೆಗಳು ಇರುವ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಯಿತು. ಈ ಸಂದರ್ಭ ಗ್ರಾಮ ಲೆಕ್ಕಿಗ ನಾಗೇಂದ್ರ, ಎ.ಎಸ್.ಐ. ಶ್ರೀನಿವಾಸ್ ಪೊಲೀಸ್ ಸಿಬ್ಬಂದಿ, ಪಂಚಾಯಿತಿ ಸಿಬ್ಬಂದಿಗಳಾದ ಮಂಜುನಾಥ, ಪುನೀತ್ ಶ್ರೀನಿವಾಸ್ ಹಾಜರಿದ್ದರು.