ಮಡಿಕೇರಿ, ಆ. 9: ಜಿಲ್ಲೆಯಲ್ಲಿ ಹೊಸದಾಗಿ 22 ಕೊರೊನಾ ಪ್ರಕರಣಗಳಯ ಪತ್ತೆಯಾಗಿವೆ. ಇದುವರೆಗೆ 705 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 436 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 11 ಮಂದಿ ಸಾವನ್ನಪ್ಪಿದ್ದು, 258 ಪ್ರಕರಣಗಳು ಸಕ್ರಿಯವಾಗಿವೆ.
ಹೊಸ ಪ್ರಕರಣಗಳ ವಿವರ
ಮಡಿಕೇರಿಯ ಕೃಷಿ ಇಲಾಖೆ ಕಚೇರಿ ಸಮೀಪದ 21 ವರ್ಷದ ಮಹಿಳೆ, ಮಹದೇವಪೇಟೆಯ 69 ವರ್ಷದ ಪುರುಷ ಮತ್ತು 24 ವರ್ಷದ ಮಹಿಳೆ, ಪೆÇನ್ನತ್ಮೊಟ್ಟೆಯ 27 ವರ್ಷದ ಪುರುಷ, ಮಡಿಕೇರಿಯ ಆಜಾದ್ ನಗರದ 40 ಮತ್ತು 19 ವರ್ಷದ ಪುರುಷ, ಶನಿವಾರಸಂತೆಯ ಗುಂಡೂರಾವ್ ಬಡಾವಣೆಯ 1 ವರ್ಷದ ಗಂಡು ಮಗು, ಕೂಡಿಗೆ ಸೇತುವೆ ಬಳಿಯ 64 ವರ್ಷದ ಪುರುಷ ಮತ್ತು 54 ವರ್ಷದ ಮಹಿಳೆ, ಕುಶಾಲನಗರ ಗುಮ್ಮನಕೊಲ್ಲಿಯ ಬಸವೇಶ್ವರ ದೇವಾಲಯ ಹಿಂಭಾಗದ 47 ವರ್ಷದ ಪುರುಷ, ಸೋಮವಾರಪೇಟೆ ಕುಸುಬೂರಿನ 60 ವರ್ಷದ ಮಹಿಳೆ, ಕಡಂಗದ 58 ವರ್ಷದ ಪುರುಷ, ಶನಿವಾರಸಂತೆಯ ವಿಘ್ನೇಶ್ವರ ಚೌಟ್ರಿ ಬಳಿಯ 39 ವರ್ಷದ ಪುರುಷ, ಶನಿವಾರಸಂತೆಯ ರಾಮಮಂದಿರ ಮುಖ್ಯರಸ್ತೆಯ 31 ವರ್ಷದ ಪುರುಷ, ಕುಶಾಲನಗರ ಬೈಚನಹಳ್ಳಿಯ ಆರ್.ಸಿ. ಲೇಔಟ್ನ 62 ವರ್ಷದ ಪುರುಷ, ಆಲೂರು ಸಿದ್ಧಾಪುರದ 60 ಮತ್ತು 79 ವರ್ಷದ ಮಹಿಳೆ, ನಾಪೋಕ್ಲುವಿನ ಮುತ್ತಪ್ಪ ದೇವಾಲಯ ಬಳಿಯ 58 ವರ್ಷದ ಪುರುಷ, ಸೋಮವಾರಪೇಟೆ ಗೋಣಿಮರೂರು ಅಂಚೆಯ ಗಣಗೂರುವಿನ 42 ವರ್ಷದ ಪುರುಷ, ಮಡಿಕೇರಿ ಗಣಪತಿ ಬೀದಿಯ 5 ವರ್ಷದ ಬಾಲಕಿ, ಮಡಿಕೇರಿಯ ಡೈರಿ ಫಾರಂನ ಅಗ್ನಿಶಾಮಕ ಕಚೇರಿ ಸಮೀಪದ 24 ವರ್ಷದ ಪುರುಷ, ಮಡಿಕೇರಿ ಕುಂಜಿಲ ಗ್ರಾಮದ 29 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.