ಸಿದ್ದಾಪುರ, ಆ. 9: ಸ್ಕೂಟಿಗೆ ಜೀಪೆÇಂದು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ಸಿದ್ದಾಪುರ ಸಮೀಪದ ಹೆರೂರು ಎಂಬಲ್ಲಿ ನಡೆದಿದೆ. ಸಿದ್ದಾಪುರದಿಂದ ಮೈಲಾಪುರ ಕಾಡ್ ಅಂಗಡಿ ಎಂಬಲ್ಲಿಗೆ ಶಿಹಾಬ್ ಎಂಬವರು ತೆರಳುತ್ತಿದ್ದ ಸ್ಕೂಟಿಗೆ ಮಾಲ್ದಾರೆಯಿಂದ ಸಿದ್ದಾಪುರಕ್ಕೆ ಬರುತ್ತಿದ್ದ ಜೀಪೆÇಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಅಬ್ದುಲ್ ಶಿಹಾಬ್‍ಗೆ ಗಂಭೀರ ಗಾಯವಾಗಿದೆ. ಜೀಪು ಚಾಲಕ ನೆಲ್ಲಿಹುದಿಕೇರಿ ಬರಡಿ ನಿವಾಸಿ ಜಗದೀಶ್ ಎಂಬವರ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಗಾಯಾಳು ಮೈಸೂರು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.