ಸುಂಟಿಕೊಪ್ಪ, ಆ. 9: ಸುಂಟಿಕೊಪ್ಪ ಲಾಕ್‍ಡೌನ್ ತೆರವುಗೊಳಿಸಿದ ಬಳಿಕ ಎರಡನೇ ಭಾನುವಾರ ಸಂತೆ ದಿನ ಮಾಮೂಲಿನಂತೆ ನಡೆಯಿತು.

ಮಾರುಕಟ್ಟೆಯಲ್ಲಿ ಕಳೆದ ಆರು ತಿಂಗಳಿಂದ ಕಳೆಗುಂದಿದ್ದ ಸಂತೆ ವ್ಯಾಪಾರ ಈ ವಾರದಲ್ಲಿ ದೂರದ ಊರುಗಳಿಂದ ಜನರು ಸಂತೆಗೆ ಬಂದು ತರಕಾರಿ ದಿನಸಿ ಸಾಮಾನು ಖರೀದಿಸುವುದು ಕಂಡು ಬಂದಿತು. ಕೊರೊನಾದ ನಡುವೆ ಕಳೆದ ಆರು ದಿನಗಳಿಂದ ಗಾಳಿ ಮಳೆಗೆ ತತ್ತರಿಸಿದ ಜನತೆ ಮಳೆ ಕಡಿಮೆಯಾದ ಕಾರಣ ಸುತ್ತ ಮುತ್ತಲಿನ ಗ್ರಾಮಗಳಿಂದ ಬೆಳಗ್ಗಿ ನಿಂದ ಸಂತೆಗೆ ಆಗಮಿಸಿದ್ದರು. ಇದು ವರೆಗೆ ವ್ಯಾಪಾರವಿಲ್ಲದೆ ಕಂಗಾಲಾಗಿದ್ದ ಸಂತೆ ವ್ಯಾಪಾರಿಗಳ ಮುಖದಲ್ಲಿ ಗೆಲುವಿನ ನಗೆ ಕಂಡು ಬಂದಿತು.