ಮಡಿಕೇರಿ, ಆ. 9: ಭಾರೀ ಮಳೆಯ ಪರಿಣಾಮವಾಗಿ ಪೊನ್ನಂಪೇಟೆ ನಿಸರ್ಗ ನಗರದಲ್ಲಿನ ಮನೆಯೊಂದರ ಬಾವಿ ಕುಸಿದು ನಷ್ಟ ಸಂಭವಿಸಿದೆ. ಅಲ್ಲಿನ ನಿವಾಸಿ ಐನಂಡ ಬೋಪಣ್ಣ ಅವರ ಮನೆಯ ಅಂಗಳದ ಬಾವಿಯ ರಿಂಗ್‍ಗಳು ಕುಸಿದು ಬಿದ್ದಿದ್ದು, ಸಮಸ್ಯೆ ಉಂಟಾಗಿದೆ. ನಷ್ಟ ಭರಿಸಿಕೊಡುವಂತೆ ಬೋಪಣ್ಣ ಅವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.