ಚೆಟ್ಟಳ್ಳಿ, ಆ. 9: ಗ್ರಾಮ ಪಂಚಾಯತಿ ವ್ಯಾಪ್ತಿಯ ಪೆÇನ್ನತ್‍ಮೊಟ್ಟೆ ಯಲ್ಲಿ ಭಾನುವಾರ ಮತ್ತೊಂದು ಕೊರೊನಾ ಸೋಂಕು ಪತ್ತೆಯಾಗಿದೆ. ಮೈಸೂರು ಜಿಲ್ಲೆಯ ಪ್ರಯಾಣದ ಇತಿಹಾಸವಿರುವ 27 ವರ್ಷದ ಯುವಕನಿಗೆ ಸೋಂಕು ಧೃಡಪಟ್ಟಿದೆ. ಸೋಂಕು ದೃಢಪಟ್ಟ ಪ್ರದೇಶದ 21 ಜನ ವಾಸವಿರುವ ಮೂರು ಮನೆಗಳಿರುವ ಪ್ರದೇಶವನ್ನು ನಿಯಂತ್ರಿತ ಪ್ರದೇಶದ ಎಂದು ಘೋಷಿಸಲಾಗಿದೆ. ಪೆÇನ್ನತ್‍ಮೊಟ್ಟ್ಟೆಯಲ್ಲಿ ಇದುವರೆಗೆ ಒಟ್ಟು ಆರು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಈ ಸಂದರ್ಭ ಕಂದಾಯ ಅಧಿಕಾರಿ ಶಿವಪ್ಪ, ಗ್ರಾಮ ಲೆಕ್ಕಿಗೆ ನಸೀಮ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಮಂಜುಳಾ, ಕಂದಸ್ವಾಮಿ, ಪೆÇನ್ನತ್‍ಮೊಟ್ಟೆ ಭಾಗದ ಆಶಾ ಕಾರ್ಯಕರ್ತೆ, ಆರೋಗ್ಯ ಅಧಿಕಾರಿಗಳು ಹಾಗೂ ಪೆÇಲೀಸ್ ಅಧಿಕಾರಿಗಳು ಇದ್ದರು.