ಶನಿವಾರಸಂತೆ, ಆ. 8: ಶನಿವಾರಸಂತೆ ವಲಯದ ಗುಡುಗಳಲೆ ಬದ್ರಿಯಾ ಮದರಸ ಶನಿವಾರಸಂತೆ, ಆ. 8: ಶನಿವಾರಸಂತೆ ವಲಯದ ಗುಡುಗಳಲೆ ಬದ್ರಿಯಾ ಮದರಸ ತುಂಡರಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.
ಮದರಸ ಸಮೀಪದ ಅರಣ್ಯದೊಳಗೆ ಹಾರೆಹೊಸೂರು ಗಿರಿಜನ ಹಾಡಿಯ ರವಿ (23)ಹಾಗೂ ನಾಗರಾಜ್ (19) ಇವರಿಬ್ಬರು ಶನಿವಾರ ಬೆಳಿಗ್ಗೆ ಶ್ರೀಗಂಧ ಮರವನ್ನು ತುಂಡರಿಸುತ್ತಿದ್ದ ಖಚಿತ ಮಾಹಿತಿ ಮೇರೆ ಅರಣ್ಯ ಇಲಾಖಾಧಿಕಾರಿಗಳು ಧಾಳಿ ಮಾಡಿ ಬಂಧಿಸಿದ್ದಾರೆ.
ರೂ. 50 ಸಾವಿರ ಬೆಲೆಬಾಳುವ ಮರದ ತುಂಡುಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಪೂಲ್ ಶೆಟ್ಟಿ, ವನಪಾಲಕ ಶ್ರೀನಿವಾಸ್, ರಕ್ಷಕರಾದ ಹರೀಶ್, ಲೋಹಿತ್, ಶಿವಪ್ಪ, ಜಯಕುಮಾರ್, ಕಾರ್ತಿಕ್, ಭರತ್ ಇದ್ದರು.