ತಲಕಾವೇರಿ, ಆ.8: ಮಳೆ ಗಾಳಿ, ಮಸುಕಾದ ಪ್ರತಿಕೂಲ ವಾತಾವರಣದ ನಡುವೆಯೂ ಶನಿವಾರ ಶವಗಳ ಶೋಧ ಕಾರ್ಯಾಚರಣೆ ನಡೆಯಿತು. ಸ್ವಾಮಿ ಆನಂದ ತೀರ್ಥರ ಶವ ಪತ್ತೆಯಾಯಿತು

ಜೆ.ಸಿ.ಬಿಗಳ ಬಳಕೆಯಿಂದ ಎನ್. ಡಿ. ಆರ್. ಎಫ್ ಮತ್ತು ಎಸ್.ಡಿ.ಆರ್. ಎಫ್ ರಕ್ಷಣಾ ತಂಡಗಳಿಂದ ಬೆ.10-30 ರ ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಸ್ವಾಮಿ ಆನಂದತೀರ್ಥರ ಪಾರ್ಥಿವ ಶರೀರಕ್ಕೆ ಬಳಿಕ ಭಾಗಮಂಡಲಕ್ಕೆ ಆಗಮಿಸಿದ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಹಾಗೂ ಮಲ್ಲಂಡ ಮಧು ಅಂತಿಮ ನಮನ ಸಲ್ಲಿಸಿದರು.ಅಪರಾಹ್ನ 3 ಗಂಟೆ ವೇಳೆ ಒಂದು ಶವ ದೊರಕಿತು. ಸ್ವಾಮೀಜಿ ಅವರ ಶವವು ಹಾಸಿಗೆಯಲ್ಲಿ ಸುತ್ತಿಕೊಂಡಿದ್ದ ಸ್ಥಿತಿಯಲ್ಲಿ ಕಂಡುಬಂದಿತು. ಗುರುವಾರ ರಾತ್ರಿ ಬ್ರಹ್ಮಗಿರಿ ಭಾಗದಿಂದ ಸಂಭವಿಸಿದ ಭೂಕುಸಿತದಿಂದ ತಲಕಾವೇರಿಯ ಪ್ರಧಾನ ಅರ್ಚಕ ಟಿ.ಎಸ್. ನಾರಾಯಣಾಚಾರ್ ಅವರ ಮನೆ ಸೇರಿ ಎರಡು ಮನೆಗಳು ನೆಲಸಮಗೊಂಡಿದ್ದವು. ಆ ಸಂದರ್ಭ ನಾರಾಯಣಾಚಾರ್, ಅವರ ಇಂದು ಬೆಳಿಗ್ಗೆ ಉಸ್ತುವಾರಿ ಸಚಿವರು ಮಡಿಕೇರಿಯಲ್ಲಿ ಸಭೆ ಕರೆದಿದ್ದರು. ಆದರೆ, ಭಾಗಮಂಡಲ ಕ್ಷೇತ್ರದ ಜವಾಬ್ದಾರಿ ಹಿನ್ನೆಲೆಯಲ್ಲಿ ಸಭೆಗೆ ತೆರಳದೆ ಬೋಪಯ್ಯ ಅವರು ಸೀದಾ ತಲಕಾವೇರಿಯತ್ತ ಧಾವಿಸಿದರು. “ಶಕ್ತಿ” ಯೊಂದಿಗೆ ಮಾತನಾಡಿದ ಅವರು ನಾರಾಯಣಾಚಾರ್ ಅವರು ಸಂಘ ಪರಿವಾರಕ್ಕೆ ಸಲ್ಲಿಸಿದ ಸೇವೆ ಅಪಾರ ಎಂದು ಸ್ಮರಿಸಿಕೊಂಡರು. ಅವರು ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದರು.

ಪತ್ನಿ ಶಾಂತ, ಹಿರಿಯ ಸಹೋದರ ಸ್ವಾಮಿ ಆನಂದ ತೀರ್ಥರು ಹಾಗೂ ಇನ್ನಿತರ ಇಬ್ಬರು ಸಹಾಯಕ ಅರ್ಚಕರುಗಳಾದ ರವಿಕಿರಣ್ ಮತ್ತು ಶ್ರೀನಿವಾಸ್ ಕಣ್ಮರೆಯಾಗಿದ್ದು, ಆ ಪೈಕಿ ಇಂದು ಒಂದು ಪಾರ್ಥಿವ ಶರೀರವು ನೆಲಸಮಗೊಂಡಿದ್ದ ಮೃತರ ಕುಟುಂಬಗಳಿಗೆ ಪರಿಹಾರ ಮೃತರ ಕುಟುಂಬದ ಬಂಧುಗಳಿಗೆ ಸರ್ಕಾರ ವತಿಯಿಂದ 5 ಲಕ್ಷ, ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ ಸೇರಿ 7 ಲಕ್ಷ ಪರಿಹಾರವನ್ನು ವಿತರಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಪ್ರಕಟಿಸಿದರು. ಜಿಲ್ಲೆಯಾದ್ಯಂತ 52 ಕಡೆ ಪ್ರವಾಹದಿಂದ ಸಮಸ್ಯೆಯಾಗಿದೆ. ಬ್ರಹ್ಮಗಿರಿ, ಕಡಗದಾಳು ಜೋಡುಪಾಲ ನೀರುಕೊಲ್ಲಿ , ಪೆರಾಜೆ ಸೇರಿ 16 ಕಡೆ ಭೂಕುಸಿತ ಆಗಿದೆ. ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ಕ್ಷಿಪ್ರ ಕಾರ್ಯಾಚರಣೆ ನಡೆಸುತ್ತಿದ್ದು ಜಿಲ್ಲೆಯ ಜನತೆ ಆತಂಕ ಪಡುವ ಅವಶ್ಯಕತೆ ಇಲ್ಲ್ಲ ಎಂದು ಸಚಿವರು ಹೇಳಿದರು.

(ಮೊದಲ ಪುಟದಿಂದ) ಮನೆಗಳ ಸ್ಥಳದಲ್ಲಿಯೇ ಪತ್ತೆಯಾಗಿದೆ. ಸಂಜೆ ವೇಳೆ ಕಾರ್ಯಾಚರಣೆ ಅಸಾಧ್ಯವಾಗಿರುವದರಿಂದ ಇಂದು ಸ್ಥಗಿತಗೊಳಿಸಲಾಯಿತು.

ಭಾನುವಾರ ಮತ್ತೆ ಮುಂದುವರಿಸಲು ನಿರ್ಧರಿಸಲಾಯಿತು. ಕಾರ್ಯಾಚರಣೆ ಸಂದರ್ಭ ಮನೆಗಳಿದ್ದ ಸ್ಥಳದಿಂದ ಸುಮಾರು 20 ಅಡಿಗಳ ಕೆಳಭಾಗ ಕೆಲವು ಪಾತ್ರೆ, ಪದಾರ್ಥ, ಸರಂಜಾಮುಗಳು ಗೋಚರಿಸಿದವು.

ಅಂತ್ಯಸಂಸ್ಕಾರ ವಿಳಂಬ

ಅಂತ್ಯ ಸಂಸ್ಕಾರವನ್ನು ಇಂದೇ ನೆರವೇರಿಸಲು ಮೊದಲು ನಿರ್ಧರಿಸಲಾಗಿತ್ತಾದರೂ ಬಳಿಕ ಇನ್ನೂ ಪಾರ್ಥಿವ ಶರೀರಗಳು ಪತ್ತೆಯಾಗಬೇಕಿದ್ದು ಆ ನಂತರವಷ್ಟೇ ಶವ ಸಂಸ್ಕಾರ ನಡೆಸುವಂತೆಯೂ ತಾವು ಕೂಡ ಪಾಲ್ಗೊಳ್ಳಲಿರುವದಾಗಿಯೂ ನಾರಾಯಣಾಚಾರ್ ಅವರ ಇಬ್ಬರು ಪುತ್ರಿಯರು ಕೋರಿದುದರಿಂದ ಇಂದು ಅಂತ್ಯ ಸಂಸ್ಕಾರ ಕಾರ್ಯವನ್ನು ಕೈಬಿಡಲಾಯಿತು. ಇಬ್ಬರು ಪುತ್ರಿಯರೂ ವಿದೇಶದಲ್ಲಿದ್ದು ಅವರು ಬರಬೇಕಿದೆ. ಇದೀಗ ಆನಂದತೀರ್ಥರ ಪಾರ್ಥಿವ ಶರೀರವನ್ನು ಮಡಿಕೇರಿಯ ಶವಾಗಾರಕ್ಕೆ ತರಲಾಗಿದ್ದು, ಶೈಥ್ಯಾಗಾರದಲ್ಲಿ ಸಂರಕ್ಷಿಸುವ ವ್ಯವಸ್ಥೆ ಕೈಗೊಳ್ಳಲಾಗಿದೆ.