ಮಡಿಕೇರಿ, ಆ. 8: ಧಾರಾಕಾರ ಗಾಳಿ - ಮಳೆಯಿಂದಾಗಿ ವಿದ್ಯುತ್ ಇಲಾಖೆಗೆ (ಸೆಸ್ಕ್)ಗೆ ಈ ತನಕ 1800ಕ್ಕೂ ಅಧಿಕ ಕಂಬಗಳು ಹಾನಿಗೀಡಾಗಿರುವುದಾಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ಅವರು ಸಚಿವ ಸೋಮಣ್ಣ ಅವರು ಇಂದು ನಡೆಸಿದ ಸಭೆಯ ಸಂದರ್ಭ ಮಾಹಿತಿ ನೀಡಿದರು.
ಪರಿಸ್ಥಿತಿಯನ್ನು ನಿಭಾಯಿಸಲು ಸುಮಾರು 200ರಷ್ಟು ಸಿಬ್ಬಂದಿಗಳನ್ನು ಹೆಚ್ಚುವರಿಯಾಗಿ ಕರೆಸಲಾಗಿದ್ದು, ಕಾರ್ಯಾಚರಿಸುತ್ತಿರುವುದಾಗಿ ಅವರು ತಿಳಿಸಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ ಅವರು, ವಿದ್ಯುತ್ ಸಮಸ್ಯೆ ಸರಿಪಡಿಸಲು ತ್ವರಿತಗತಿಯ ಪ್ರಯತ್ನ ನಡೆಸುವಂತೆ ಸೂಚಿಸಿದರು. ಕೊಡಗು ಸೂಕ್ಷ್ಮ ಪ್ರದೇಶವಾಗಿದ್ದು, ಜನತೆ ವಿದ್ಯುತ್ಗಾಗಿ ಹಲವಾರು ದಿನಗಳ ಕಾಲ ಪರಿತಪಿಸುವಂತಾಗಬಾರದು ಎಂದು ಸಚಿವರು ಸೂಚಿಸಿದರು.