ವೀರಾಜಪೇಟೆ, ಆ. 8: ಕಳೆದ ಐದು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಭಾರೀ ಮಳೆಗೆ ವೀರಾಜಪೇಟೆಯ ಬೆಟ್ಟ ಪ್ರದೇಶವಾದ ಅರಸುನಗರ, ಮಲೆತಿರಿಕೆಬೆಟ್ಟ, ಅಯ್ಯಪ್ಪಬೆಟ್ಟ ಹಾಗೂ ನೆಹರೂನಗರದಲ್ಲಿ ಸುಮಾರು 12 ಮನೆಗಳಿಗೂ ಅಧಿಕ ಭಾಗಶಃ ಜಖಂಗೊಂಡಿದ್ದು, ಇನ್ನು ಕೆಲವೆಡೆಗಳಲ್ಲಿ ಬರೆ ಜರೆದಿರುವ ದೂರುಗಳು ಬಂದಿವೆ. ಬೆಟ್ಟದ ಪ್ರದೇಶದಲ್ಲಿ ಮನೆಗಳಿಗೆ ಜಖಂಗೊಂಡಿದ್ದು ಯಾವುದೇ ಹೆಚ್ಚಿನ ಅನಾಹುತವಾಗಿಲ್ಲವೆನ್ನಲಾಗಿದೆ.

ವೀರಾಜಪೇಟೆ ಪಟ್ಟಣದ ಈ ನಾಲ್ಕು ಬೆಟ್ಟ ಪ್ರದೇಶದಲ್ಲಿ ವಾಸಿಸುತ್ತಿರುವ ನಿವಾಸಿಗಳು ಭಾರೀ ಮಳೆಯ ಹಿನ್ನಲೆಯಲ್ಲಿ ಜೀವಭಯದಿಂದ ಆತಂಕದ ಕ್ಷಣಗಳನ್ನು ಎದುರಿಸುವಂತಾಗಿದೆ. ತಾಲೂಕು ಆಡಳಿತ ಗಂಜಿಕೇಂದ್ರವನ್ನು ಆರಂಭಿಸಿದ್ದರೂ ಕೇವಲ ಐದು ಕುಟುಂಬಗಳು ಮಾತ್ರ ಗಂಜಿ ಕೇಂದ್ರದಲ್ಲಿ ಆಶ್ರಯವನ್ನು ಪಡೆದಿವೆ.

ವೀರಾಜಪೇಟೆ ವಿಭಾಗದಲ್ಲಿ ಬೆಳಗಿನಿಂದಲೇ ಮಳೆಯ ಪ್ರಮಾಣ ಇಳಿಮುಖಗೊಂಡಿದ್ದರೂ ಬೆಟ್ಟದ ಪ್ರದೇಶದ ನಿವಾಸಿಗಳಿಗೆ ಆತಂಕತಪ್ಪಿಲ್ಲ. ವೀರಾಜಪೇಟೆ, ಆ. 8: ಕಳೆದ ಐದು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಭಾರೀ ಮಳೆಗೆ ವೀರಾಜಪೇಟೆಯ ಬೆಟ್ಟ ಪ್ರದೇಶವಾದ ಅರಸುನಗರ, ಮಲೆತಿರಿಕೆಬೆಟ್ಟ, ಅಯ್ಯಪ್ಪಬೆಟ್ಟ ಹಾಗೂ ನೆಹರೂನಗರದಲ್ಲಿ ಸುಮಾರು 12 ಮನೆಗಳಿಗೂ ಅಧಿಕ ಭಾಗಶಃ ಜಖಂಗೊಂಡಿದ್ದು, ಇನ್ನು ಕೆಲವೆಡೆಗಳಲ್ಲಿ ಬರೆ ಜರೆದಿರುವ ದೂರುಗಳು ಬಂದಿವೆ. ಬೆಟ್ಟದ ಪ್ರದೇಶದಲ್ಲಿ ಮನೆಗಳಿಗೆ ಜಖಂಗೊಂಡಿದ್ದು ಯಾವುದೇ ಹೆಚ್ಚಿನ ಅನಾಹುತವಾಗಿಲ್ಲವೆನ್ನಲಾಗಿದೆ.

ವೀರಾಜಪೇಟೆ ಪಟ್ಟಣದ ಈ ನಾಲ್ಕು ಬೆಟ್ಟ ಪ್ರದೇಶದಲ್ಲಿ ವಾಸಿಸುತ್ತಿರುವ ನಿವಾಸಿಗಳು ಭಾರೀ ಮಳೆಯ ಹಿನ್ನಲೆಯಲ್ಲಿ ಜೀವಭಯದಿಂದ ಆತಂಕದ ಕ್ಷಣಗಳನ್ನು ಎದುರಿಸುವಂತಾಗಿದೆ. ತಾಲೂಕು ಆಡಳಿತ ಗಂಜಿಕೇಂದ್ರವನ್ನು ಆರಂಭಿಸಿದ್ದರೂ ಕೇವಲ ಐದು ಕುಟುಂಬಗಳು ಮಾತ್ರ ಗಂಜಿ ಕೇಂದ್ರದಲ್ಲಿ ಆಶ್ರಯವನ್ನು ಪಡೆದಿವೆ.

ವೀರಾಜಪೇಟೆ ವಿಭಾಗದಲ್ಲಿ ಬೆಳಗಿನಿಂದಲೇ ಮಳೆಯ ಪ್ರಮಾಣ ಇಳಿಮುಖಗೊಂಡಿದ್ದರೂ ಬೆಟ್ಟದ ಪ್ರದೇಶದ ನಿವಾಸಿಗಳಿಗೆ ಆತಂಕತಪ್ಪಿಲ್ಲ. ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಹೊನ್ನಿ ಕೊಪ್ಪ ಹಾಗೂ ಹೊಳೆಕೆರೆ ಎಂಬ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯ ಎರಡೂ ಕಡೆ ರಸ್ತೆ ಕುಸಿದು ನೀರಿನಲ್ಲಿ ಕೊಚ್ಚಿ ಹೋಗಿದ್ದು ಎರಡೂ ಪ್ರದೇಶಗಳ ನಡುವೆ ಸಂಪರ್ಕ ಕಡಿದು ಹೋಗಿದೆ.

ಸೇತುವೆ ಮಾತ್ರ ಹೊಳೆಯ ಮಧ್ಯದಲ್ಲಿದ್ದು ಎರಡೂ ಕಡೆಯ ರಸ್ತೆಯಿಂದ ಬೇರ್ಪಟ್ಟಿದೆ. ಕಳೆದ ಮೂರು ವರ್ಷದ ಹಿಂದೆ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಹೊಳೆಕೆರೆಯಲ್ಲಿ 12ಕ್ಕಿಂತಲೂ ಹೆಚ್ಚು ಕುಟುಂಬಗಳು ವಾಸವಾಗಿದ್ದು ಈ ಪ್ರದೇಶದ ಜನರು, ತಮ್ಮ ಮನೆಗಳಿಗೆ ತೆರಳಬೇಕಾದರೆ ಸುಮಾರು 1 ಕಿ.ಮೀ.ನಷ್ಟು ದೂರ ಗದ್ದೆಯ ಮೂಲಕ ಕಾಲು ನಡಿಗೆಯಲ್ಲಿ ಸಾಗಬೇಕಾಗಿದೆ. ಗಾಳಿ ಮಳೆಯ ರಭಸಕ್ಕೆ ಕಿರುಗೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವಾರು ವಿದ್ಯುತ್ ಕಂಬಗಳು ಧರೆಗುರುಳಿದ್ದು ಕಳೆದ 5 ಆರು ದಿನಗಳಿಂದ ಈ ಭಾಗಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕೆಇಬಿ ಸಿಬ್ಬಂದಿಗಳು ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಕಿರುಗೂರಿನ ಬಹುತೇಕ ಗದ್ದೆಗಳು ಜಲಾವೃತಗೊಂಡಿದ್ದು, ನಾಟಿ ಮಾಡಿದ್ದ ಗದ್ದೆಗಳು ಮರಳಿನಲ್ಲಿ ಮುಚ್ಚಿಹೋಗಿವೆ.

ಇಳಿಯದ ಪ್ರವಾಹ

ಸಿದ್ದಾಪುರ ಭಾಗದಲ್ಲಿ ಮಳೆ ಕೊಂಚ ಬಿಡು ಕೊಟ್ಟರೂ ಪ್ರವಾಹ ಕಡಿಮೆಯಾಗಿರುವುದಿಲ್ಲ ಕರಡಿಗೋಡು ಗ್ರಾಮದ ನದಿ ತೀರದಲ್ಲಿ ಇರುವ ಪ್ರದೇಶದಲ್ಲಿ ಹಲವಾರು ಮನೆಗಳು ಮುಳುಗಡೆಯಾಗಿವೆ. ಗುಹ್ಯ ಗ್ರಾಮದ ನದಿತೀರದ ಮನೆಗಳು ಕೂಡ ಜಲಾವೃತಗೊಂಡಿದ್ದು ನದಿ ತೀರದ ನಿವಾಸಿಗಳು ಮುಂಜಾಗ್ರತ ಕ್ರಮವಾಗಿ ಅವರುಗಳು ಸಂಬಂಧಿಕರ ಮನೆಗೆ ತೆರಳಿದ್ದಾರೆ.

ಸಿದ್ದಾಪುರ ಸುತ್ತಮುತ್ತಲ ಗ್ರಾಮೀಣ ಪ್ರದೇಶದ ನದಿತೀರದ ಸಮೀಪವಿರುವ ಬಹುತೇಕ ರಸ್ತೆಗಳು ಜಲಾವೃತಗೊಂಡಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಗ್ರಾಮಸ್ಥರು ಪರ್ಯಾಯ ಮಾರ್ಗದಲ್ಲಿ ಪಟ್ಟಣಕ್ಕೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೆಲ್ಲಿಹುದಿಕೇರಿ ಗ್ರಾಮದ ನದಿ ತೀರದ ಅನತಿದೂರದಲ್ಲಿರುವ ಬಹಳಷ್ಟು ಮನೆಗಳು ಜಲಾವೃತಗೊಂಡಿದ್ದು, ಕಾಫಿ ತೋಟಗಳು, ಅಡಿಕೆ ತೋಟಗಳು, ಭತ್ತದ ಕೃಷಿ ಮಾಡಿರುವ ಗದ್ದೆಗಳು ಸಂಪೂರ್ಣವಾಗಿ ಮುಳುಗಡೆ ಗೊಂಡಿರುತ್ತದೆ.

ನೆಲ್ಲಿಹುದಿಕೇರಿ ಪಟ್ಟಣ ಸಮೀಪವೂ ಕೂಡ ಪ್ರವಾಹದ ನೀರು ಬಂದಿದ್ದು, ಸಂಪೂರ್ಣ ಜಲಾವೃತ ಗೊಂಡಿರುತ್ತದೆ. ಕಂದಾಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು ಎಲ್ಲ ರೀತಿಯ ಮುಂಜಾಗ್ರತ ಕ್ರಮವನ್ನು ಹಾಗೂ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.

ನೀರಿನಲ್ಲಿ ಕಾಫಿ ತೋಟ

ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿ ನೂರಾರು ಎಕರೆ ಕಾಫಿ ತೋಟ ಹಾಗೂ ಗದ್ದೆ ಕೃಷಿಗಳು ಮುಳುಗಡೆ ಗೊಂಡಿದೆ. ವಾಲ್ನೂರು ಗ್ರಾಮದ ಮುಂಡರು ಮನೆ ಅಚ್ಚಯ್ಯ, ಗಿರೀಶ, ಬಿದ್ದಪ್ಪ, ಹಾಲಪ್ಪ ಎಂಬವರ ಪ್ರವಾಹಕ್ಕೆ ಸಿಲುಕಿ ಕಾಫಿ ತೋಟಗಳು ಹಾಗೂ ಕೃಷಿ ಮಾಡಿದ ಭತ್ತದ ಸಸಿಗಳು ಸಂಪೂರ್ಣವಾಗಿ ಮುಳುಗಡೆ ಆಗಿ ಅಪಾರ ನಷ್ಟ ಸಂಭವಿಸಿದೆ. ಗದ್ದೆ ಹಾಗೂ ತೋಟಗಳಲ್ಲಿ ಪ್ರವಾಹ ನೀರು ನಿಂತು ಪೈರುಗಳು ನಾಶವಾಗಿದೆ.

ಸಿದ್ದಾಪುರದ ಇಟ್ಟಿಗೆ ಉದ್ಯಮಿ ತೋಮಸ್ ಎಂಬವರಿಗೆ ಸೇರಿದ ಸಿಮೆಂಟ್ ಇಟ್ಟಿಗೆ ತಯಾರಿಸುವ ಘಟಕಕ್ಕೆ ಪ್ರವಾಹದ ನೀರು ತುಂಬಿ ಸಂಪೂರ್ಣ ಮುಳುಗಡೆಯಾಗಿದೆ. ಯಂತ್ರೋಪಕರಣಗಳು ಕೂಡ ದುರಸ್ತಿ ಆಗಿದ್ದು, ನಷ್ಟ ಸಂಭವಿಸಿದೆ.

ಬಿಡುವು ನೀಡಿದ ವರುಣ

ಗೋಣಿಕೊಪ್ಪಲು: ಕಳೆದ ಆರು ದಿನಗಳಿಂದ ಒಂದೇ ಸಮನೆ ಸುರಿಯುತ್ತಿದ್ದ ಮಳೆ ಶನಿವಾರ ಬಿಡುವು ನೀಡಿದ್ದು ಸೂರ್ಯನ ಕಿರಣಗಳು ಬೆಳಕು ಚೆಲ್ಲಿದವು. ಜಲಾವೃತಗೊಂಡಿದ್ದ ಗೋಣಿಕೊಪ್ಪಲುವಿನ ಕಾವೇರಿ ಹಿಲ್ಸ್, ನೇತಾಜಿ 2ನೇ ವಿಭಾಗ, ಅಚ್ಚಪ್ಪ ಬಡಾವಣೆ, ಸೇರಿದಂತೆ ಇನ್ನಿತರ ಕಡೆಗಳಲ್ಲಿ ಕೀರೆಹೊಳೆಯ ಪ್ರವಾಹದ ನೀರು ಕಡಿಮೆಯಾಗಿತ್ತು.

ನದಿಯ ನೀರು ಇಳಿಮುಖವಾಗುತ್ತಿದ್ದಂತೆಯೇ ಬಡಾವಣೆಯಿಂದ ತೆರಳಿದ್ದ ನಿವಾಸಿಗಳು ಮತ್ತೆ ತಮ್ಮ ಮನೆಗಳತ್ತ ತೆರಳಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಮಳೆಯ ಕಾರಣ ಕೆಲವು ರಸ್ತೆಗಳು ಬಂದ್ ಆಗಿದ್ದವು. ಮಳೆ ಕಡಿಮೆ ಹಿನ್ನೆಲೆಯಲ್ಲಿ ಪಂಚಾಯಿತಿ ಅಧಿಕಾರಿಗಳು ರಸ್ತೆಗಳಲ್ಲಿ ಸಾರ್ವಜನಿಕರ ಓಡಾಟಕ್ಕೆ ಅವಕಾಶ ಕಲ್ಪಿಸಿದರು.