ವಿವಾಹ ಸಂದರ್ಭ ವಿದರ್ಭನ ನೂರು ಆದಿಮ ಸಂಜಾತೆ ಹೆಣ್ಣು ಮಕ್ಕಳನ್ನು ಚಂದ್ರವರ್ಮನ 11 ಮಕ್ಕಳಿಗೆ ಹಂಚಿದ ಸಂಖ್ಯಾಕ್ರಮ ಹೀಗಿದೆ: ಮೊದಲನೆಯ ಪುತ್ರನಿಗೆ ಇಪ್ಪತ್ತು ಯುವತಿಯರು, ದ್ವಿತೀಯ ಪುತ್ರನಿಗೆ 16 ಮಂದಿ ಯುವತಿಯರು, ತೃತೀಯ ಪುತ್ರನಿಗೆ 12 ಮಂದಿ ಯುವತಿಯರು, ಚತುರ್ಥ ಪುತ್ರನಿಗೆ 10 ಮಂದಿ ಯುವತಿಯರು, 5 ಮತ್ತು 6 ನೆಯ ಪುತ್ರರಿಗೆ ತಲಾ ಎಂಟು ಮಂದಿಯಂತೆ 16 ಯುವತಿಯರು, 7 ಮತ್ತು 8 ನೆಯ ಪುತ್ರರಿಗೆ ತಲಾ ಏಳರಂತೆ 14 ಮಂದಿ ವಧುಗಳು ಹಾಗೂ ಇನ್ನುಳಿದ ಮೂವರು ಪುತ್ರರಿಗೆ ತಲಾ ನಾಲ್ವರಂತೆ 12 ಯುವತಿಯರನ್ನು ಸೇರಿ ಒಟ್ಟು 100 ಮಂದಿ ವಧುಗಳನ್ನು 11 ಮಂದಿ ವರರಿಗೆ ಸಂತಾನಾಭಿವೃದ್ಧಿ ದೃಷ್ಟಿಯಿಂದ ಪೋಷಕರಾದ ಇಬ್ಬರು ರಾಜರೂ ಧಾರೆಯೆರೆದು ಕೊಟ್ಟರು. ಬಳಿಕ ಚಂದ್ರವರ್ಮನು ವಿದರ್ಭನನ್ನು ಅವನ ರಾಜ್ಯಕ್ಕೆ ಬೀಳ್ಕೊಟ್ಟನು. ಬಳಿಕ ಚಂದ್ರವರ್ಮನು ತನ್ನ ಹನ್ನೊಂದು ಮಂದಿ ಶೂರರಾದ ಮಕ್ಕಳೊಂದಿಗೆ ಬಹುಕಾಲದವರೆಗೆ ಹರ್ಷಯುಕ್ತನಾಗಿ ರಾಜ್ಯವಾಳಿದನು. ಹೀಗಿರಲು ಒಂದು ದಿನ ತನ್ನನ್ನು ಹರಸಿದ ಇಷ್ಟ ದೈವವಾದ ಪಾರ್ವತಿಯ ಅಡಿದಾವರೆಯನ್ನು ಧ್ಯಾನಮಾಡುತ್ತಾ ಚಂದ್ರವರ್ಮನು ರಾಜ್ಯಭೋಗದಲ್ಲಿ ವೈರಾಗ್ಯವನ್ನು ತಳೆದನು. ಪಿತೃಪೂಜಕರೂ, ಉಮಾಮಹೇಶ್ವರ ಪೂಜಕರೂ, ಧರ್ಮಿಷ್ಠರೂ, ದೈವ, ಧಾರ್ಮಿಕ ಭಕ್ತರೂ , ಕತ್ತಿ ಶೂಲ ಮೊದಲಾದ ವಿವಿಧ ಶಸ್ತ್ರಗಳಿಂದ ಯುದ್ಧ ಮಾಡುವದರಲ್ಲಿ ನಿಪುಣರೂ ಆದ ತನ್ನ 11 ಮಂದಿ ಮಕ್ಕಳನ್ನು ಸನಿಹಕ್ಕೆ ಕರೆದನು. ಮಕ್ಕಳನ್ನುದ್ದೇಶಿಸಿ “ಪ್ರೀತಿಯ ಮಕ್ಕಳೇ ನನಗೆ ವಯಸ್ಸಾಗಿದೆ; ಮುಪ್ಪು ಬಂದಿದೆ. ನಾನು ಇನ್ನು ಮುಂದೆ ರಾಜ್ಯ ಪರಿಪಾಲನೆ ಮಾಡಲು ಶಕ್ತನಾಗಿಲ್ಲ. ಕಾಡಿಗೆ ತೆರಳಿ ಸದಾ ಪಾರ್ವತಿಯ ಪಾದಯುಗ್ಮವನ್ನು ಧ್ಯಾನಿಸುತ್ತಾ ಲೋಕಾಂತರಕ್ಕೆ ಹೋಗಲಿಚ್ಛಿಸುವೆನು. ನೀವೇ ರಾಜ್ಯವನ್ನು ಪಾಲನೆ ಮಾಡಿ.
ದೇವೀಪ್ರಸಾದಜಾ ಯೂಯಂ ರಾಜ್ಯಂ ದತ್ತಮಿದಂ ತಯಾ
ಯುಷ್ಮಭ್ಯಮಪಿ ಸಾ ದೇವೀ ಕಾವೇರೀತ್ಯಭಿದಾನತಃ
ತೀರ್ಥರೂಪೇಣ ಸಂಭೂತಾ ಸ್ವಲ್ಪ ಕಾಲಾದಬಹೂನ್ವರಾನ್
ಈಪ್ಸಿತಾನ್ದಾಸ್ಯತಿ ಪರಾ ಯುಷ್ಮತ್ಮತ್ಪ್ರೇಮಪರಾ ಸತೀ
ತಸ್ಮಾತ್ತೀರ್ಥಸ್ವರೂಪಾ ಯಾದೇವ್ಯಸ್ಮ್ಸತ್ಕುಲದೇವತಾ
ತಸ್ಮಾದ್ಭಜತ ನಿತ್ಯಂ ತಾಂ ತದ್ಭಕ್ತಿಯುತಚೇತಸಾ
ಅಂಬಿಕಾಯಾಸ್ತು ಕಾವೇರ್ಯಾ ಭಕ್ತಿ ಸರ್ವಪದಾ ಶುಭಾ
ಅಸ್ಮತ್ಕುಲೇ ಕಿಯತ್ಕಾಲಂ ತಾವದ್ವಂಶಃ ಪ್ರವರ್ಧತೇ
ದೇವಿಯ ಪ್ರಸಾದದಿಂದ, ಪಾರ್ವತಿ ಮಾತೆಯ ಅನುಗ್ರಹದಿಂದಲೇ ನೀವು ಹುಟ್ಟಿದಿರಿ. ಅವಳೇ ಈ ರಾಜ್ಯವನ್ನು ಕೊಟ್ಟಿರುವಳು. ಆ ಪಾರ್ವತಿಯೇ ಮುಂದೆ ಕಾವೇರಿ ಎಂಬ ಹೆಸರು ತಾಳಿ ತೀರ್ಥರೂಪದಲ್ಲಿ ಹರಿಯುತ್ತಾಳೆ. ಅವಳು ನಿಮ್ಮಲ್ಲಿ ತುಂಬ ಪ್ರೇಮವನ್ನಿಟ್ಟಿರುವಳು. ನಮ್ಮ ಕುಲದೇವತೆಯೂ, ತೀರ್ಥಸ್ವರೂಪಿಣಿಯೂ ಆದ ಅವಳನ್ನು ನೀವು ಸದಾ ಭಕ್ತಿಯಿಂದ ಕೂಡಿದ ಮನಸ್ಸಿನಿಂದ ಭಜಿಸಿ. ಪಾರ್ವತೀ ಸ್ವರೂಪಿಣಿಯಾದ ಕಾವೇರಿಯಲ್ಲಿ ನೀವು ಭಕ್ತಿಯನ್ನಿಡುವದರಿಂದ ನಿಮಗೆ ಸಮಸ್ತವೂ ಲಭಿಸುವದು. ಮಕ್ಕಳೇ, ಕಾವೇರಿಯಲ್ಲಿ ನಮಗೆ ಭsಕ್ತಿಯಿರುವವರೆಗೆ ನಮ್ಮ ವಂಶವು ವೃದ್ಧಿಗೊಳ್ಳುವದು. ಅಷ್ಟು ಮಾತ್ರವಲ್ಲ. ಕಾವೇರಿಯ ಮೇಲಿನ ಭಕ್ತಿಯೊಂದಿಗೆ, ದ್ವಿಜರ ಮೇಲೆಯೂ ಗೌರವವಿರಲಿ ಎಂದು ಮಕ್ಕಳಿಗೆ ಉಪದೇಶಿಸಿದ ಚಂದ್ರವರ್ಮನು ತನ್ನ ಹಿರಿಯ ಮಗನಾದ ಪರಾಕ್ರಮವುಳ್ಳವರಾಗಿದ್ದರು. ಸರ್ವ ಲಕ್ಷಣ ಸಂಪನ್ನರೂ, ಸಕಲಾಸ್ತ್ರ ಪ್ರವೀಣರೂ ಆಗಿದ್ದರು. ಜಾತಃಕರ್ಮಾದಿ ಕ್ರಿಯೆಗಳಿಂದ ಸಂಸ್ಕøತರೂ, ಬುದ್ಧಿ ಚಾತುರ್ಯ ವುಳ್ಳವರೂ ಆಗಿದ್ದರು. ಯೋಚಿ ಸುವ ಕಾರ್ಯವನ್ನು ಸಾಧಿಸುವ ಸಾಮಥ್ರ್ಯ ಹೊಂದಿದ್ದರು. ಮೊಳವುದ್ದ ಕತ್ತಿಯನ್ನು ಹಿಡಿದ ವರೂ, ಗದಾ ಸಮಾನವಾದ ಬಾಹುಗಳುಳ್ಳವರೂ ಆಗಿದ್ದರು.
ನಿಶಿತಕ್ರೋಡಸಂಘೋರದಂಷ್ಟ್ರಾಕಾರಾಂಗುಳಾಸ್ತಥಾ
ವಜ್ರಕಲ್ಪಕ್ರೋಡಮುಖಕಾರ್ಯಹಾರಿದೃಢೋಚ್ಛ್ರಯಾಃ
ಸಹಸ್ರಾಧಿಕಸಂಖ್ಯಾಕಾ ಧರಾಧರವಿಭೇದಕಾಃ
ತಾದೃಶಾಃ ಪುತ್ರಕಾಸ್ಸರ್ವೇ ಸ್ವಸ್ಥಾನಂ ವೀಕ್ಷ್ಯ ಸಂಗ್ರಹಂ
ಏಕೀಭೂಯತತಸ್ಸರ್ವೇ ಪುರಾನ್ನರ್ಗತ್ಯ ಸತ್ವರಾಃ
ಸ್ಥಾನಾನಿಕರ್ತುಂ ಪ್ರತ್ಯೇಕಮುದ್ಯಮಂ ಚಕ್ರುರುದ್ಧತಾಃ
ಸಂವೀಕ್ಷ್ಯ ಪರ್ವತಾರಣ್ಯರುದ್ಧಂ ಗಾಢಂ ಪ್ರದೇಶಕಂ
ಲೀಲಯಾ ಪುತ್ರಕಾಸ್ಸರ್ವೇ ಪಂಚಯೋಜನಮಾತ್ರತಃ
ವಲಯಾಕಾರತೋ ವ್ಯಾಪ್ತಾ ನಖೈರ್ಹಸ್ತತಲೈರಪಿ
ಖಂಡಂ ಖಂಡಂ ಚ ಭಿತ್ವೈವ ಮುಹುರ್ತಾತ್ಸಮಭೂಮಿಕಾಂ
ಚಕ್ರುರ್ನಖಾಯುಧಾಃ ಪುತ್ರಾಸ್ತಥಾ ಹಸ್ತ ತಲಾಯುಧಾಃ
ಬ್ರಹ್ಮಾದಿಸ್ತೂಯಮಾನಂ ಹಿ ಭಗವತ್ಕ್ರೋಡರೂಪಿಕಂ
ಹಿರಣ್ಯಾಕ್ಷವಪುರ್ಭಿತ್ವಾ ಯಥಾ ಭೂಮಿಂ ಸಮುದ್ಧರತ್
ತಥಾ ತೇ ಬ್ರಹ್ಮಮುನಿಭಿಸ್ಸ್ತೂಯಮಾನಾಶ್ಚ ಪುತ್ರಕಾಃ
ಗಾಢಸ್ವಹಸ್ತ ಸಂಕ್ರೋಡ ಭಗವತ್ಕ್ರೋಡರೂಪತಃ
ಪರ್ವತಾರಣ್ಯದೈತ್ಯೇಂದ್ರಗಾತ್ರ ವಿಚ್ಛೇದನಾದಪಿ
ಸಮೀಕೃತ್ವಾ ಹಿ ಭೂಭಾಗಂ ಸ್ಥಾನಾನ್ಯಪಿ ಬಹೂನಿ ಚ
ತದ್ದೇಶಂ ಸರ್ವತೋ ವ್ಯಾಪ್ತಾಸ್ಸ್ವಸ್ತ್ರೀಭಿಶ್ಚ ಸಮನ್ವಿತಾಃ
ತೀಕ್ಷ್ಣವೂ, ಭಯಂಕರವೂ ಆದ ವರಾಹನ ಕೋರೆ ದಾಡೆಗಳಂತೆ ಬೆರಳುಗಳುಳ್ಳವರೂ, ವರಾಹದಂತೆ ವಜ್ರಾಯಧ ರೀತಿಯಲ್ಲಿ ಕಾರ್ಯವನ್ನು ಸೂರೆಗೊಳ್ಳುವವರೂ ಆಗಿದ್ದರು. ದೃಢವಾದ ಶರೀರ ಸೌಷ್ಠವವುಳ್ಳವರೂ, ಬೆಟ್ಟಗಳನ್ನು ಬೇಧಿಸುವಂತ ಶಕ್ತಿವಂತರೂ ಆಗಿದ್ದರು. ಇಂತಹ ಸಾವಿರಾರು ಮಕ್ಕಳು ತಾವು ನೆಲೆಸಿರುವ ಸ್ಥಳ ಕಡಿಮೆ ಪ್ರಮಾಣದಲ್ಲಿರುವದನ್ನು ಗಮನಿಸಿದರು. ಎಲ್ಲರೂ ಐಕಮತ್ಯದಿಂದ ತಾವಿರುವ ಪಟ್ಟಣದಿಂದ ಹೆಮ್ಮೆಯಿಂದ ಹೊರಟು ತಮ್ಮ ಪ್ರದೇಶವನ್ನು ವಿಸ್ತರಣೆಗೊಳಿಸಲು ಉದ್ಯುಕ್ತರಾದರು. ಪರ್ವತಗಳಿಂದಲೂ, ಕಾಡುಗಳಿಂದಲೂ ವ್ಯಾಪ್ತವಾಗಿದ್ದ ಗಟ್ಟಿಯಾಗಿದ್ದ ಸ್ಥಳಗಳನ್ನು ಕಂಡು ಹಿಡಿದರು. ಆ ಮಕ್ಕಳೆಲ್ಲರೂ ಸೇರಿಕೊಂಡು ಐದು ಯೋಜನದಷ್ಟು ಪ್ರದೇಶವನ್ನು ಉಗುರುಗಳಿಂದಲೂ, ಕೈಗಳಿಂದಲೂ ಖಂಡ ತುಂಡವಾಗಿ ಬೇಧಿಸಿದರು. ಮುಹೂರ್ತ ಮಾತ್ರದಲ್ಲಿ ಬಯಲು ಪ್ರದೇಶವಾಗಿ ಪರಿವರ್ತಿಸಿದರು. ಅವರ ಈ ಮಹತ್ಕಾರ್ಯ ಹೇಗಿತ್ತೆಂದರೆ, ಭಗವಂತನ ವರಾಹಾವತಾರವು ಹಿರಣ್ಯಾಕ್ಷನ ಶರೀರವನ್ನು ಭೇದಿಸಿದಂತೆ ಕಂಡು ಬರುತ್ತಿದ್ದಿತು. ಉಗುರುಗಳು ಹಾಗೂ ಕೈಗಳನ್ನೇ ಆಯುಧವಾಗಿಸಿ ಕಾರ್ಯ ನಿರ್ವಹಿಸಿದುದು ವರಾಹಾವತಾರೀ ಭಗವಂತ ಭೂಮಿ ಯನ್ನು ಮೇಲಕ್ಕೆತ್ತಿದ ಸಾಹಸದಂತೆ ತೋರುತ್ತಿತ್ತು. ಆ ಸಂದರ್ಭದಲ್ಲಿ ಈ ಮಕ್ಕಳ ಊಹಿಸಲೂ ಅಸಾಧ್ಯವಾದ ಈ ಕಾರ್ಯ ಚತುರತೆಯನ್ನು ಗಮನಿಸುತ್ತಿದ್ದ ಬ್ರಹ್ಮರ್ಷಿಗಳೂ ವಿಸ್ಮಿತರಾಗಿ ಪ್ರಶಂಸೆ ವ್ಯಕ್ತಗೊಳಿಸಿದರು. ಭೂಮಿ ಸಮತಟ್ಟಾದ ಬಳಿಕ ,ಮನೆಗಳನ್ನು ನಿರ್ಮಿಸಿಕೊಂಡು ತಮ್ಮ ಪತ್ನಿಯರೊಡಗೂಡಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಇವರ ಕಾರ್ಯವು ಶ್ರೀ ಹರಿಯ ವರಾಹವತಾರದ ಪ್ರತೀಕದಂತೆ ಕಂಡುಬಂದಿದೆ. ಆದ್ದರಿಂದ ಇವರೆಲ್ಲ ಪರಮಾತ್ಮ ಸ್ವರೂಪಿಯಾದ ವರಾಹಾಂಶ ಸಂಭೂತರೆನ್ನುವದರಲ್ಲಿ ಸಂದೇಹವಿಲ್ಲ ಋಷಿ ಮುನಿಗಳೇ ಎಂದು ಸೂತ ಪುರಾಣಿಕನು ಶೌನಕಾದಿ ಮುನಿ ಗಳೊಂದಿಗೆ ವರ್ಣಿಸಿದನು. ಇದರಿಂದಾಗಿ ಅವರು ವರಾಹದಂತೆ ನಡೆಸಿದ ಆ ಕಾರ್ಯದಿಂದ ಮೊದಲ್ಗೊಂಡು ಅವರಿಗೆ ಕ್ರೋಡರೆಂಬ (ವರಾಹ) ಹೆಸರು ಶಾಶ್ವತವಾಗಿ ನಿಲ್ಲುವದು. ಇತರರಿಗೆ ಆ ಹೆಸರನ್ನು ಪಡೆಯಲು ಅಸಾಧ್ಯವಾಗಿರುವದರಿಂದ ಆ ಹೆಸರಿಗೆ ಅಧಿಕü ಕೀರ್ತಿ ಲಭಿಸುವದು. ಅಂದಿನಿಂದ ಆ ಜನರಿಗೆ ಕ್ರೋಡರೆಂಬ ಹೆಸರು ಚಿರಸ್ಥಾಯಿಯಾಯಿತು. ಅಲ್ಲದೆ, ಅವರಿಗೆ ಆಶ್ರಯದಾತವಾದ ಆ ಪ್ರದೇಶವು ಕ್ರೋಡದೇಶವೆಂದು ಖ್ಯಾತಿ ಪಡೆಯಿತು. ಪರಮಾತ್ಮನ ವರಾಹಾವತಾರದ ಚರಿತ್ರೆಯಂತೆ, ಈ ದೇಶದ ಇತಿಹಾಸವಿದ್ದು ಈ ದೇಶಕ್ಕೆ ಹಿಂದೆ ತಿಳಿಸಿದ್ದಂತೆ ಬ್ರಹ್ಮಕ್ಷೇತ್ರ, ಮಾತ್ಸ್ಯ ದೇಶದ ಹೆಸರಿನೊಂದಿಗೆ ಮೂರನೇ ಹೆಸರಾಗಿ ಕ್ರೋಡದೇಶವೆಂದು ಪರಿಗಣಿಸಲ್ಪಟ್ಟಿದೆ. ಮಾನವನ ಕಲ್ಯಾಣವನ್ನು ವೃದ್ಧಿಗೊಳಿಸುವ ಉತ್ಕøಷ್ಟವಾದ ಈ ಚರಿತ್ರೆಯು ಪವಿತ್ರವಾದು ದಾಗಿದೆ ಎಂದು ಸೂತನು ವಿವರಿಸಿದನು.