ಪೆರಾಜೆ, ಆ. 8: ಯುವಕೋಟೆ ಯುವಕಮಂಡಲ ಪುತ್ಯ ಪೆರಾಜೆ ವತಿಯಿಂದ ಪುತ್ಯಪೆರಾಜೆ ವ್ಯಾಪ್ತಿಯ ರಸ್ತೆಯ ಬದಿಯಲ್ಲಿ ಬೆಳೆದಿರುವ ಕಳೆ-ಗಿಡಗಂಟಿಗಳನ್ನು ಸ್ವಚ್ಛಗೊಳಿಸುವದರ ಮೂಲಕ ಶ್ರಮದಾನ ಮಾಡಲಾಯಿತು.
ಈ ಕಾರ್ಯದಲ್ಲಿ ಯುವಕ ಮಂಡಲದ ಅಧ್ಯಕ್ಷ ಲಿಖಿನ್ ಅಡ್ಕದ, ಕಾರ್ಯದರ್ಶಿ ಕೌಶಿಕ್ ತೊಕ್ಕುಳಿ, ಗೌರವಾಧ್ಯಕ್ಷ ಶುಭಾಶ್ ಬಂಗಾರಕೋಡಿ, ಉಪಾಧ್ಯಕ್ಷ ಮೋನಿಶ್ ವ್ಯಾಪಾರೆ, ಗೌರವ ಸಲಹೆಗಾರ ಚಿನ್ನಪ್ಪ ಅಡ್ಕ ಸೇರಿದಂತೆ ಯುವಕಮಂಡಲ ಪದಾಧಿಕಾರಿಗಳು, ಸದಸ್ಯರುಗಳು ಹಾಜರಿದ್ದರು.