ಸುಂಟಿಕೊಪ್ಪ, ಆ.8: ಹಳೆ ವೈಷಮ್ಯದ ಹಿನೆÀ್ನಲೆ ಗುಂಪು ಘರ್ಷಣೆ ನಡೆದಿದ್ದು, 8 ಜನರ ವಿರುದ್ಧ ಮೊಕದ್ದಮೆ ದಾಖಲಾಗಿದೆ.
ಕೊಡಗರಹಳ್ಳಿ ಇಬ್ರಾಹಿಂ ಹಾಗೂ ಸಹೋದರರು ಮಸೀದಿಯಲ್ಲಿ ನಮಾಜ್ ಮುಗಿಸಿ ಬರುತ್ತಿರುವಾಗ ಹಂಸ, ಸಲೀಂ, ಬಿಲಾಲ್, ಸುಲೈ, ಸಬಾಸ್ಟೀನ್, ಪಾಪುಣಿ ಹಾಗೂ ಶರತ್ ಎಂಬವರು ಹಳೆಯ ವೈಷಮ್ಯದ ಹಿನೆÀ್ನಲೆ ಇಬ್ರಾಹಿಂ ಎಂಬವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದು, ತೀವ್ರ ಗಾಯಗೊಂಡ ಇಬ್ರಾಹಿಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಂಸ, ಸಲೀಂ, ಬಿಲಾಲ್, ಸುಲೈ, ಸಬಾಸ್ಟೀನ್, ಪಾಪುಣಿ ಹಾಗೂ ಶರತ್ ಅವರುಗಳ ವಿರುದ್ಧ ದೂರು ದಾಖಲಿಸಿ ರುವ ಸುಂಟಿಕೊಪ್ಪ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.