ಮಡಿಕೇರಿ, ಆ. 8: ಕೋವಿಡ್-19 ಮುಂದುವರಿದ ಕಾರಣ ಇ.ಸಿ.ಹೆಚ್.ಎಸ್. ಅವಲಂಬಿತರು ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಔಷಧಿಗಳನ್ನು ಇ.ಸಿ.ಹೆಚ್.ಎಸ್. ಚೀಟಿಯ ಪ್ರಕಾರ ಹೊರಗಡೆಯಿಂದ ತೆಗೆದುಕೊಳ್ಳಬಹುದು. ಔಷಧಿಗಳಿಗೋಸ್ಕರ ಸೆಪ್ಟೆಂಬರ್ 30 ರ ತನಕ ಇ.ಸಿ.ಹೆಚ್.ಎಸ್.ಗೆ ಬರುವ ಅವಶ್ಯಕತೆ ಇರುವುದಿಲ್ಲ.

ಔಷಧಿಗಳ ಬಿಲ್ಲಿನ ಜೊತೆಗೆ ಇ.ಸಿ.ಹೆಚ್.ಎಸ್. ಕಾರ್ಡ್, ಬ್ಯಾಂಕ್ ಪಾಸ್‍ಬುಕ್‍ನ ಜೆರಾಕ್ಸ್ ಪ್ರತಿಯನ್ನು ತಂದುಕೊಡಬೇಕಿದೆ.