ಸುಂಟಿಕೊಪ್ಪ, ಆ. 8: ಆಟೋ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಬಾಲೆಕಾಡು ಪ್ರಕಾಶ ಎಂಬವರು ಇತ್ತೀಚೆಗೆ ಕೊರೊನಾ ಲಾಕ್‍ಡೌನ್ ಸಂದರ್ಭ ತೋಟದಲ್ಲಿ ಮರ ಕಪಾತು ಮಾಡುತ್ತಿದ್ದಾಗ ಮರದಿಂದ ಬಿದ್ದು ಗಾಯಗೊಂಡು ಕೆಲಸವಿಲ್ಲದೆ ಜೀವನ ನಡೆಸಲು ಕಷ್ಟಪಡುವುದನ್ನು ಮನಗಂಡು ಇಲ್ಲಿನ ಆಟೋ ಚಾಲಕರ ಮತ್ತು ಮಾಲೀಕರ ಸಂಘದವರು ಸಂಗ್ರಹಿಸಿದ ಆರು ಸಾವಿರ ಹಣವನ್ನು ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಸಂದರ್ಭ ಸಂಘದ ಅಧ್ಯಕ್ಷ ಸಂತೋಷ್ (ದಿನು), ಉಪಾಧ್ಯಕ್ಷರಾದ ನವೀದ್, ಸುನೀಲ್, ಬಿ.ಆರ್. ನಾರಾಯಣ, ಕಾರ್ಯದರ್ಶಿ ಪ್ರಶಾಂತ್ (ಕೋಕಾ), ಸಹ ಕಾರ್ಯದರ್ಶಿ ಫೆಲಿಕ್ಸ್, ಲೋಕೇಶ್, ಥೋಮಸ್, ಶಶಿ, ರಂಜೀತ್, ಗೌರವ ಅಧ್ಯಕ್ಷರಾದ ಬಿ.ಎಲ್.ವಿಶ್ವನಾಥ್, ಸಿ.ಚಂದ್ರ, ಸಂಘಟನಾ ಕಾರ್ಯದರ್ಶಿಗಳಾದ ಮಂಜು, ಜೀವನ್, ಸಂತೋಷ್ ಹಾಜರಿದ್ದರು.