ಸೋಮವಾರಪೇಟೆ, ಆ.7: ಇಲ್ಲಿನ ತಾಲೂಕು ಕಚೇರಿಗೆ ಒತ್ತಿ ಕೊಂಡಂತಿರುವ ಸರ್ವೆ ಇಲಾಖೆಯ ಸಿಬ್ಬಂದಿಯೋರ್ವರಿಗೆ ಕೊರೊನಾ ಪಾಸಿಟಿವ್ ವರದಿ ಬಂದ ಹಿನ್ನೆಲೆ, ಸರ್ವೆ ಇಲಾಖಾ ಕಚೇರಿಯನ್ನು 2 ದಿನಗಳ ಕಾಲ ಸೀಲ್‍ಡೌನ್ ಮಾಡಲಾಗಿದೆ.

ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರು ಕಚೇರಿಯನ್ನು ಸೀಲ್‍ಡೌನ್ ಮಾಡಿದ್ದು, ಸ್ಯಾನಿಟೈಸರ್ ಮಾಡಲು ಪಟ್ಟಣ ಪಂಚಾಯಿತಿಗೆ ಸೂಚಿಸಿದ್ದಾರೆ. ಸರ್ವೆ ಇಲಾಖೆ ಇರುವ ಕಟ್ಟಡದಲ್ಲಿಯೇ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಕಚೇರಿ, ಗ್ರಾಮ ಲೆಕ್ಕಾಧಿಕಾರಿ ಗಳ ಕಚೇರಿಯೂ ಇದ್ದು, ಈ ಕಚೇರಿಗಳಲ್ಲಿ ಯಾವದೇ ಆತಂಕ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.