ಮಡಿಕೇರಿ, ಆ. 7: ತಲಕಾವೇರಿ ಸನ್ನಿಧಿಯ ಪ್ರಧಾನ ಅರ್ಚಕರು, ಅವರ ಕುಟುಂಬ ಸೇರಿ ಐವರು ಭೂಕುಸಿತ ಸಂದರ್ಭ ಕಣ್ಮರೆಯಾದ ದುರ್ಘಟನೆಯ ಹಿನ್ನೆಲೆ ಶೋಧನಾ ಕಾರ್ಯಕ್ಕೆ ಜಿಲ್ಲಾಡಳಿತ ಅಣಿಯಾಗುತ್ತಿದೆ. ಇಂದು ಸಚಿವರು, ಶಾಸಕರು, ಅಧಿಕಾರಿಗಳು ತಲಕಾವೇರಿಯಲ್ಲಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಭಾಗಮಂಡಲದಿಂದ ತಲಕಾವೇರಿವರೆಗೆ ಅಲ್ಲಲ್ಲಿ ಭೂಕುಸಿತವುಂಟಾಗಿದ್ದ ರಸ್ತೆ ಸಂಚಾರವನ್ನು ಸುಗಮಗೊಳಿಸಿದ ಬಳಿಕ ಎನ್ಡಿಆರ್ ಹಾಗೂ ಎಸ್ಡಿಆರ್ ತಂಡಗಳಿಂದ ಕಾರ್ಯಾಚರಣೆ ನಡೆಯಲಿರುವದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹ ಖಚಿತಪಡಿಸಿದರು.ಗುರುವಾರ ಸಂಭವಿಸಿದ ದುರ್ಘಟನೆಯಲ್ಲಿ ಅರ್ಚಕ ಟಿ.ಎಸ್. ನಾರಾಯಣಾಚಾರ್ ಅವರ ಪತ್ನಿ ಶಾಂತ, ಹಿರಿಯ ಸಹೋದರ ಆನಂದ ತೀರ್ಥರು, ಇನ್ನಿಬ್ಬರು ಸಹಾಯಕರುಗಳಾದ ರವಿಕಿರಣ್ ಮತ್ತು ಶ್ರೀನಿವಾಸ್ ಕಣ್ಮರೆಯಾದ ಬಗ್ಗೆ ಇಂದು ಸಚಿವರು, ಸಂಸದರು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ತೀವ್ರ ಖೇದ ವ್ಯಕ್ತಪಡಿಸಿದರು. ಅಲ್ಲದೆ ಜಿಲ್ಲೆಯ ಶಾಸಕರು, ಮೇಲ್ಮನೆ ಸದಸ್ಯರು, ಜಿ.ಪಂ. ಪ್ರಮುಖರು ಕೂಡ, ಅಧಿಕಾರಿಗಳು ಖುದ್ದು ಪರಿಶೀಲಿಸಿ ತೀವ್ರ ಆಘಾತಕಾರಿ ದೃಶ್ಯದಿಂದ ಮರುಗಿದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ವಿಪರೀತ ಗಾಳಿ - ಮಳೆಯಿಂದ ತಲಕಾವೇರಿ ದುರಂತ ಸ್ಥಳದಲ್ಲಿ ಕಣ್ಮರೆಯಾಗಿರುವ ಐವರ ಸಹಿತ ಜಾನುವಾರುಗಳು, ವಾಹನದೊಂದಿಗೆ ಮನೆಯ ವಸ್ತುಗಳ ಪತ್ತೆಗೆ ಕಾರ್ಯಾಚರಣೆ ನಡೆಸಲು ಅಡಚಣೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾ, ಮಳೆ ಹಾಗೂ ಗಾಳಿ ಕಡಿಮೆ ಆಗಿ ಜಲಪ್ರವಾಹ ಇಳಿಮುಖವಾದರೆ ಶೋಧ ಕಾರ್ಯಾಚರಣೆ ಕೈಗೊಳ್ಳುವದಾಗಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.
ಎನ್ಡಿಆರ್ಎಫ್ - ಎಸ್ಡಿಆರ್ಎಫ್ ಸಿದ್ಧ : ಈಗಾಗಲೇ ಕೇಂದ್ರ ಸರಕಾರದ ಎನ್ಡಿಆರ್ಎಫ್ ಹಾಗೂ ರಾಜ್ಯ ಸರಕಾರದ ಎಸ್ಡಿಆರ್ಎಫ್ ಸೇರಿದಂತೆ ಕೊಡಗು ಪೊಲೀಸ್, ಅಗ್ನಿಶಾಮಕದಳ, ಗೃಹರಕ್ಷಕರು ಮತ್ತು ಜಿಲ್ಲಾಡಳಿತ, ಸ್ಥಳೀಯರೊಂದಿಗೆ ಕಣ್ಮರೆಯಾದವರ ಶೋಧ ಕಾರ್ಯ ಕೈಗೊಳ್ಳಲು ಸಂಘಟಿತ ಪ್ರಯತ್ನ ನಡೆಸಲಾಗುವದು ಎಂದು ಈ ವೇಳೆ ಪ್ರತಿಕ್ರಿಯಿಸಿದ ಸಚಿವರು, ಮಳೆ ಮತ್ತು ಕಾವೇರಿ ಪ್ರವಾಹ ಇಳಿಮುಖಗೊಂಡ ಬೆನ್ನಲ್ಲೇ ಶೋಧಕ್ಕೆ ಮುಂದಾಗುವದಾಗಿ ಸ್ಪಷ್ಟಪಡಿಸಿದರು.
ಜನರ ಪ್ರಾಣ ರಕ್ಷಣೆ : ಕಳೆದ ವರ್ಷ ವೀರಾಜಪೇಟೆ ತಾಲೂಕಿನ ತೋರಾದಲ್ಲಿ ಸಂಭವಿಸಿದ್ದ ದುರಂತದಷ್ಟೇ ಭಯಾನಕ ರೀತಿ ತಲಕಾವೇರಿ ಅನಾಹುತ ಎದುರಾಗಿದ್ದು, ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಎಲ್ಲೆಡೆ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ನೆಲ್ಲಿಹುದಿಕೇರಿ, ಕರಡಿಗೋಡು, ವೀರಾಜಪೇಟೆ ಅಯ್ಯಪ್ಪ ಬೆಟ್ಟ ಮತ್ತು ಭಾಗಮಂಡಲದಲ್ಲಿ 2 ಕಡೆಯೊಂದಿಗೆ ಒಟ್ಟು 5 ಕಡೆ ಕಾಳಜಿ ಕೇಂದ್ರ ಆರಂಭಿಸಿ ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು. ಮುಖ್ಯವಾಗಿ ಈಗಿನ ಸನ್ನಿವೇಶದಲ್ಲಿ ಜನತೆಯ ಪ್ರಾಣ ರಕ್ಷಣೆಗೆ ಸರಕಾರ ಮತ್ತು ಜಿಲ್ಲಾಡಳಿತ ಪ್ರಥಮ ಆದ್ಯತೆ ನೀಡುವದಾಗಿ ಭರವಸೆಯಿತ್ತರು.
ಜನತೆಯ ಅಳಲು : ತಲಕಾವೇರಿ ಅರ್ಚಕ ಕುಟುಂಬದ ಪ್ರಶಾಂತ್ ಆಚಾರ್ ಸೇರಿದಂತೆ ಚೇರಂಗಾಲ ಸುತ್ತಮುತ್ತಲಿನ ಗ್ರಾಮಸ್ಥರು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರೊಂದಿಗೆ, ಅರಣ್ಯ ಇಲಾಖೆ ಕೈಗೊಂಡಿರುವ ಬ್ರಹ್ಮಗಿರಿ ಬೆಟ್ಟಶ್ರೇಣಿಯ
(ಮೊದಲ ಪುಟದಿಂದ) ಇಂಗುಗುಂಡಿಗಳು ಹಾಗೂ ಕಂದಾಯ ಸಿಬ್ಬಂದಿ ನಿರ್ಮಿಸಿರುವ ರೆಸಾರ್ಟ್ ಕಾಮಗಾರಿ ಇಂದಿನ ದುರಂತಕ್ಕೆ ಕಾರಣವೆಂದು ಅಳಲು ತೋಡಿಕೊಂಡರು.
ಪರಿಶೀಲಿಸಲು ಕ್ರಮ : ತಲಕಾವೇರಿ ದುರಂತ ಯಾವ ರೀತಿ ಸಂಭವಿಸಿದೆ ಎನ್ನುವ ಕುರಿತು ಜಿಲ್ಲಾಡಳಿತದಿಂದ ಪರಿಶೀಲಿಸಿ ಅಗತ್ಯ ಮಾಹಿತಿ ಸಂಗ್ರಹಿಸಲಾಗುವದು ಎಂದು ಜನತೆಗೆ ಆಶ್ವಾಸನೆ ನೀಡಿದ ಸಚಿವರು, ಯಾರಿಂದಲೇ ತಪ್ಪು ಕಂಡು ಬಂದರೆ, ಆ ದಿಸೆಯಲ್ಲಿ ಸೂಕ್ತ ಕ್ರಮವನ್ನು ಸರಕಾರ ಕೈಗೊಳ್ಳಲಿರುವದಾಗಿ ಸ್ಪಷ್ಟಪಡಿಸಿದರು. ಕಣ್ಮರೆಯಾಗಿರುವ ಕುಟುಂಬ ಜಿಲ್ಲಾಡಳಿತ ಅಥವಾ ಗ್ರಾ.ಪಂ. ಹಾಗೂ ಗ್ರಾಮಸ್ಥರ ಸಲಹೆ ಕೇಳಿದ್ದರೆ, ಅಪಾಯದಿಂದ ಪಾರಾಗಬಹುದಿತ್ತು ಎಂದು ನೆನಪಿಸಿದರು.
ಪ್ರತಾಪ್ ಸಿಂಹ ಪ್ರತಿಕ್ರಿಯೆ: ಈ ವೇಳೆ ‘ಶಕ್ತಿ’ಯೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು, ಈಗಾಗಲೇ ರಾಜ್ಯ ಸರಕಾರದ ನಿರ್ದೇಶನದಂತೆ ಜಿಲ್ಲಾ ಉಸ್ತುವಾರಿ ಸಚಿವರು ಕೊಡಗಿಗೆ ಭೇಟಿ ನೀಡಿದ್ದು, ಜಿಲ್ಲಾಡಳಿತ ಸಾಧ್ಯವಿರುವ ಎಲ್ಲಾ ಮಾರ್ಗೋಪಾಯದಿಂದ ಪರಿಸ್ಥಿತಿ ನಿಭಾಯಿಸಲು ಸನ್ನದ್ಧವಿರುವದಾಗಿ ನುಡಿದರು.
ಆಘಾತಕಾರಿ ಘಟನೆ : ಪ್ರತಿವರ್ಷ ತುಲಾ ಸಂಕ್ರಮಣ ಜಾತ್ರೆಯಲ್ಲಿ ಭಾಗವಹಿಸುತ್ತಾ ತಾವು ಕಾವೇರಿ ಮಾತೆಯಷ್ಟೇ ಭಕ್ತಿಯಿಂದ ನಾರಾಯಣಾಚಾರ್ ಅವರನ್ನು ಗೌರವಿಸಿದ್ದು, ಅರ್ಚಕ ಕುಟುಂಬವೊಂದು ಗ್ರಾಮದ ಅಧಿಕ ಮಂದಿ ಭಾಗವಹಿಸಿದ್ದರು. ಈ ಸಂದರ್ಭ ಜಿ.ಎಂ. ಸಲಿ, ಎಂ.ಆರ್. ಉತ್ತಪ್ಪ, ಕುಡೆಕ್ಕಲ್ ನಿತ್ಯ, ಕೆ.ಬಿ. ಸುಂದರ, ಕುಶಾಲಪ್ಪ, ನಿವೃತ್ತ ವಲಯ ಅರಣ್ಯಾಧಿಕಾರಿ ಚಂಗಪ್ಪ, ಗೋಪಾಲಕೃಷ್ಣ, ಕುಡೆಕ್ಕಲ್ ಗಣೇಶ್, ಕೆ.ಡಿ. ಗಿರೀಶ್, ಎ. ರವಿ, ಲವ ನಂಜಪ್ಪ, ಮಂಜು, ಕೆ.ಆರ್. ದಿನೇಶ್, ಪಪ್ಪಿ, ನಟರಾಜ್, ಶಶಿ, ಮುಂತಾದವರು ಹಾಜರಿದ್ದರು.ಸೋಮವಾರಪೇಟೆ: 1990 ಮತ್ತು 1992 ರಲ್ಲಿ ನಡೆದ ಅಯೋಧ್ಯೆ, ರಾಮ ಜನ್ಮಭೂಮಿಯ ಕರಸೇವೆಯಲ್ಲಿ ಭಾಗವಹಿಸಿದ್ದ ಮಾದಾಪುರ ವ್ಯಾಪ್ತಿಯ ಕರಸೇವಕರನ್ನು ಮಾದಾಪುರ ಘಟಕದ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.
ಮಾದಾಪುರದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರಸೇವಕರಾದ ಯು. ಅಣ್ಣು, ಎಂ.ಕೆ. ತಿಮ್ಮಯ್ಯ, ಎಂ.ಎಸ್. ಉತ್ತಪ್ಪ, ಉಮೇಶ್, ಎಸ್. ಆನಂದ್, ಎಂ.ಆರ್. ಗೋಪಾಲ್ ಅವರುಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಕರಸೇವೆಯಲ್ಲಿ ಭಾಗಿಯಾಗಿದ್ದು, ಇತ್ತೀಚೆಗೆ ನಿಧನರಾದ ಡಿ.ಎಸ್. ಕುಟ್ಟಪ್ಪ, ಬಾಲಕೃಷ್ಣ ಅವರುಗಳ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆಯ ತಾಲೂಕು ಕಾರ್ಯದರ್ಶಿ ಸುನಿಲ್, ಮಾದಾಪುರ ಘಟಕದ ಅಧ್ಯಕ್ಷ ಬಿ.ಸಿ. ರಮೇಶ್, ಉಪಾಧ್ಯಕ್ಷ ಅನಿಲ್ಕುಮಾರ್, ಪ್ರಧಾನ ಕಾರ್ಯದರ್ಶಿ ಜಯರಾಮ್, ಪದಾಧಿಕಾರಿಗಳಾದ ರಾಜೇಶ್, ವಿನೋದ್, ಅಭಿಲೇಶ್ ಸೇರಿದಂತೆ ಗರಗಂದೂರು, ಮಲ್ಲಿಕಾರ್ಜುನ ಕಾಲೋನಿ, ಚಾಮುಂಡೇಶ್ವರಿ ಕಾಲೋನಿ, ಇಗ್ಗೋಡ್ಲು ಆಶ್ರಮ ಕಾಲೋನಿ, ಜಂಬೂರು ಬಾಣೆ ಘಟಕದ ಕಾರ್ಯಕರ್ತರು ಭಾಗವಹಿಸಿದ್ದರು.
ಚೆಟ್ಟಳ್ಳಿ: ಭಾರತೀಯ ಜನತಾ ಪಾರ್ಟಿ ಚೆಟ್ಟಳ್ಳಿ ವತಿಯಿಂದ ಪೂಜೆ ಸಲ್ಲಿಸಿ ನಂತರ ಚೆಟ್ಟಳ್ಳಿ ಶ್ರೀ ನರೇಂದ್ರ ಮೋದಿ ಸಹಕಾರ ಭವನದಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ಈ ಸಂದರ್ಭ ಕರಸೇವಕರಾಗಿ ಸೇವೆ ಸಲ್ಲಿಸಿದ ಬೊಪ್ಪಟ್ಟಿರ ಅಪ್ಪುಟ್ಟ ಅವರನ್ನು ಸನ್ಮಾನಿಸಲಾಯಿತು.ಪೊನ್ನಂಪೇಟೆ: ಪೆÇನ್ನಂಪೇಟೆಯ ಬಸವೇಶ್ವರ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭ 1992 ರಲ್ಲಿ ಪೆÇನ್ನಂಪೇಟೆಯಿಂದ ಅಯೋಧ್ಯೆಗೆ ತೆರಳಿದ್ದ ಕರಸೇವಕ ಪಿ.ಆರ್. ಮೋಹನ್ ಬಾಬು ಅವರನ್ನು ಸನ್ಮಾನಿಸಲಾಯಿತು.
ಆರ್.ಎಸ್.ಎಸ್. ಪ್ರಮುಖರಾದ ಕೆ.ಜಿ. ಪದ್ಮನಾಭ ಅವರು ದಿನದ ಮಹತ್ವದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ಮುದ್ದಿಯಡ ಮಂಜು ಗಣಪತಿ, ತಾಲೂಕು ಉಪಾಧ್ಯಕ್ಷ ಚೋಡುಮಾಡ ಶ್ಯಾಮ್ ಪೂಣಚ್ಚ , ಗ್ರಾಮ ಪಂಚಾಯಿತಿ ಸದಸ್ಯರು, ತಾಲೂಕು ಕೃಷಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ತೋರಿರ ವಿನು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಜಿತು ಪೂಜಾರಿ ಸಿಹಿ ಹಂಚಿದರು.ಈ ಕ್ಷೇತ್ರದಲ್ಲಿ ಕಣ್ಮರೆಯಾಗಿರುವದು ಆಘಾತಕಾರಿಯೆಂದು ನೋವು ತೋಡಿಕೊಂಡರು.
ಪುತ್ರಿಯರಿಗೆ ಸಾಂತ್ವನ : ವಿದೇಶದಲ್ಲಿ ನೆಲೆಸಿರುವ ಪ್ರಧಾನ ಅರ್ಚಕರ ಪುತ್ರಿಯರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಸಚಿವರು ಮತ್ತು ಸಂಸದರು, ಕೊಡಗಿಗೆ ಆಗಮಿಸಲು ಅಗತ್ಯ ವ್ಯವಸ್ಥೆಯ ಭರವಸೆ ನೀಡಿದರಲ್ಲದೆ, ಮಳೆ ಪರಿಸ್ಥಿತಿ ನೋಡಿಕೊಂಡು ಕಣ್ಮರೆಯಾದವರ ಪತ್ತೆ ಕಾರ್ಯ ಕೈಗೊಳ್ಳಲಾಗುವದು ಎಂದು ಸಾಂತ್ವನ ನೀಡಿದರು.
ಇಂದು ಸಭೆ - ನಿರ್ಧಾರ: ತಲಕಾವೇರಿ ದುರಂತ ಹಾಗೂ ಕೊಡಗಿನಲ್ಲಿ ಜಲಪ್ರವಾಹದೊಂದಿಗೆ ಜನತೆಯಲ್ಲಿ ಉಂಟಾಗಿರುವ ಆತಂಕ ಸೇರಿದಂತೆ ಮಡಿಕೇರಿ - ಮಂಗಳೂರು ರಸ್ತೆಯಲ್ಲಿ ಜಿಲ್ಲಾಡಳಿತ ಭವನ ಬಳಿ ಭೂಕುಸಿತದಿಂದ ಅಪಾಯ ಎದುರಾಗುತ್ತಿರುವ ಬಗ್ಗೆ ತಾ. 8 ರಂದು (ಇಂದು) ಸಭೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವದು ಎಂದು ಸಚಿವ ವಿ. ಸೋಮಣ್ಣ ಸ್ಪಷ್ಟಪಡಿಸಿದರು.
ಕೋವಿಡ್ -19 ತಪಾಸಣೆ : ಈಗಾಗಲೇ ತಲಕಾವೇರಿ, ಚೇರಂಗಾಲ, ತಣ್ಣಿಮಾನಿ, ಚೆಟ್ಟಿಮಾನಿ, ನೆಲ್ಲಿಹುದಿಕೇರಿ, ಕರಡಿಗೋಡು, ವೀರಾಜಪೇಟೆ ಮುಂತಾದೆಡೆಗಳಲ್ಲಿ ಅಪಾಯದಲ್ಲಿರುವ ಕುಟುಂಬಗಳನ್ನು ಐದು ಕಡೆ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಈ ಕುಟುಂಬಗಳಿಗೆ ಅಗತ್ಯ ಊಟ, ವಸತಿಯೊಂದಿಗೆ ಕೊರೊನಾ ಸೋಂಕಿತ ಬಗ್ಗೆ ತಪಾಸಣೆ ನಡೆಸಿ, ಸೋಂಕು ಪತ್ತೆಯಾದರೆ ಅಂತಹವರನ್ನು ನೇರವಾಗಿ ಕೋವಿಡ್ -19 ಜಿಲ್ಲಾಸ್ಪತ್ರೆಗೆ ದಾಖಲಿಸಲಾಗುವದು ಎಂದು ಸಚಿವರು ಮಾಹಿತಿಯಿತ್ತರು.
ಈ ವೇಳೆ ಶಾಸಕತ್ರಯರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚುರಂಜನ್, ಎಂ.ಪಿ. ಸುನಿಲ್, ಸುಬ್ರಮಣಿ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ, ತಹಶೀಲ್ದಾರ್ ಪಿ.ಎಸ್. ಮಹೇಶ್, ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್ ಮೊದಲಾದವರು ಹಾಜರಿದ್ದರು.