ಮಡಿಕೇರಿ, ಆ. 6: ಕಳೆದ ನಾಲ್ಕೈದು ದಿನಗಳಿಂದ ಭಾರೀ ಮಳೆ ಹಾಗೂ ಇದರೊಂದಿಗೆ ಗಾಳಿಯ ರಭಸ ಕೂಡ ಮುಂದುವರಿಯುತ್ತಿರುವ ಪರಿಸ್ಥಿತಿಯಿಂದಾಗಿ ವೀರಾಜಪೇಟೆ ತಾಲೂಕು ಅಕ್ಷರಶಃ ನಲುಗಿ ಹೋಗುತ್ತಿದೆ. ತಾಲೂಕಿನ ಬಹುತೇಕ ಎಲ್ಲಾ ಪಟ್ಟಣ ಪ್ರದೇಶಗಳು, ಗ್ರಾಮೀಣ ವಿಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಅಪಾರ ಹಾನಿಯುಂಟಾಗುತ್ತಿದೆ. ಕಾವೇರಿ ನದಿ ಹರಿಯುವ ಬೇತ್ರಿ ಸಿದ್ದಾಪುರ, ಕರಡಿಗೋಡು ಸೇರಿದಂತೆ ಲಕ್ಷ್ಮಣತೀರ್ಥ ನದಿ ಪಾತ್ರದ ಶ್ರೀಮಂಗಲ, ಬಾಳೆಲೆ ಕಾನೂರು ಗೋಣಿಕೊಪ್ಪಲುವಿನ ಕೀರೆಹೊಳೆ ಪಾತ್ರ ಸೇರಿದಂತೆ ಎಲ್ಲಾ ಜಲಾನಯನ ಪ್ರದೇಶಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಲೇ ಇದ್ದು, ಅಪಾಯದ ಅಂಚಿನಲ್ಲಿರುವ ಬಹುತೇಕ ಭತ್ತದ ಗದ್ದೆಗಳು, ವಿಶಾಲ ಪ್ರದೇಶಗಳು ಜಲಾವೃತಗೊಂಡಿವೆ. ಇದರೊಂದಿಗೆ ಎಲ್ಲೆಲ್ಲೂ ರಸ್ತೆ - ತೋಟಗಳಲ್ಲಿ ಮರ ಬಿದ್ದು ಹಾನಿಗೀಡಾಗಿರುವುದು, ಇದರೊಂದಿಗೆ ವಿದ್ಯುತ್ ಕಂಬಗಳು- ಟ್ರಾನ್ಸ್ ಫಾರ್ಮರ್‍ಗಳು ಮುರಿದುಬಿದ್ದಿದ್ದು, ತಾಲೂಕು ಕತ್ತಲೆಯಲ್ಲಿ ಮುಳುಗಿದೆ. ಬೇತ್ರಿ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಸ್ಥಗಿತಗೊಂಡಿದ್ದರೆ, ಸಿದ್ದಾಪುರ- ಕರಡಿಗೋಡಿನಲ್ಲೂ ಸಂಪರ್ಕಕ್ಕೆ ಅಡಚಣೆಯಾಗಿದೆ. ರಸ್ತೆಗೆ ಬಿದ್ದ ಮರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು, ಆರ್.ಆರ್.ಟಿ. ತಂಡ, ಸೇರಿದಂತೆ ಸಾರ್ವಜನಿಕರು ತೆರವುಗೊಳಿಸುವ ಕಾರ್ಯ ನಡೆಸುತ್ತಿದ್ದರೆ, ಮತ್ತೊಂದೆಡೆ ವಿದ್ಯುತ್ ಸಮಸ್ಯೆ ಸರಿಪಡಿಸಲು ಇಲಾಖಾ ಸಿಬ್ಬಂದಿಗಳು ಪ್ರಯಾಸಪಡುತ್ತಿದ್ದಾರೆ. ಕೆಲವಾರು ಮನೆಗಳ ಮೇಲೆ ಮರ ಬಿದ್ದಿರುವುದು, ಶೀಟು - ಹೆಂಚುಗಳು ಹಾರಿಹೋಗಿರುವುದು, ಕಾಫಿ - ಬಾಳೆ ಮತ್ತಿತರ ಫಸಲು ಹಾನಿಗೀಡಾಗಿರುವಂತಹ ಪ್ರಕರಣಗಳು ನಡೆಯುತ್ತಲೇ ಇವೆ.

ಧನುಗಾಲ ಗ್ರಾಮದಲ್ಲಿ ಮನೆ ಮೇಲೆ ಮರಬಿದ್ದು, ಕಾರ್ಮಿಕ ಮಹಿಳೆ ಕಾಳಿ ಎಂಬವರ ಕಾಲು ಮುರಿದಿದ್ದು, ಆಸ್ಪತ್ರೆಗೆ ದಾಖಲಾಗಿರುವ ಕುರಿತು ವರದಿಯಾಗಿದೆ. ತಾಲೂಕಿನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 6.29 ಇಂಚಿನಷ್ಟು ಸರಾಸರಿ ಮಳೆಯಾಗಿದೆ.

ವೀರಾಜಪೇಟೆ ವರದಿ: ವೀರಾಜಪೇಟೆ ವಿಭಾಗದಲ್ಲಿ ಭಾರೀ ಮಳೆ ಮುಂದುವರೆದುದರಿಂದ ಪಟ್ಟಣಕ್ಕೆ ವಿದ್ಯುತ್ ಇಲ್ಲದೆ ಕಾರ್ಗತ್ತಲು ಸೃಷ್ಟಿಯಾಗಿದೆ. ಇದರಿಂದ ಕುಡಿಯುವ ನಲ್ಲಿ ನೀರು ಪೊರೈಕೆಗೆ ಅಡಚಣೆ ಉಂಟಾಗಿದ್ದು, ಎರಡು ದಿನಗಳಿಂದ ಈ ವಿಭಾಗಕ್ಕೆ ವಿದ್ಯುತ್, ನೀರಿಲ್ಲದೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಂದು ವಿದ್ಯುತ್ ಸಂಪರ್ಕದ ಕಡಿತ ಮುಂದುವರೆದುದರಿಂದ ಜನರು ಪರದಾಡುವಂತಾಗಿತ್ತು.

ಎರಡು ದಿನಗಳಿಂದ ವಿದ್ಯುತ್ ಇಲ್ಲದರಿಂದ ವೀರಾಜಪೇಟೆ ವರ್ತಕರು ರಾತ್ರಿ 7 ಗಂಟೆಗೆ ಅಂಗಡಿಗಳನ್ನು ಮುಚ್ಚಿ ಮನೆಗೆ ತೆರಳುತ್ತಿರುವುದು ಕಂಡು ಬಂತು. ನಿನ್ನೆ ದಿನ ರಾತ್ರಿ ಬಿದ್ದ ಮಳೆಗೆ ಇಲ್ಲಿನ ಅಯ್ಯಪ್ಪ ಬೆಟ್ಟದಲ್ಲಿ ಪಳನಿ ಎಂಬವರಿಗೆ ಸೇರಿದ ಮನೆಯ ಗೋಡೆ ಬಿದ್ದು ಮನೆ ಭಾಗಶ: ಜಖಂಗೊಂಡಿದೆ. ಸಿದ್ದಾಪುರ ರಸ್ತೆಯಿಂದ ಅಯ್ಯಪ್ಪ ಬೆಟ್ಟದ ದೇವಸ್ಥಾನಕ್ಕೆ ಹೋಗುವ ಕಾಂಕ್ರೀಟ್ ರಸ್ತೆ ಜರುಗಿದ್ದು ಜಖಂಗೊಂಡಿದೆ. ಇದರ ಕೆಳಭಾಗವಿರುವ ಬರೆಜಾರಿದ್ದು ಮನೆತನಕವೂ ಮಣ್ಣು ಕುಸಿದಿದೆ.

ಭಾರೀ ಮಳೆಯಾಗುತ್ತಿರುವುದರಿಂದ ವೀರಾಜಪೇಟೆ ಸಮೀಪದ ಆರ್ಜಿ ಗ್ರಾಮದ ಗದ್ದೆ, ಕದನೂರು ಗ್ರಾಮದ ಗದ್ದೆ ಜಲಾವೃತಗೊಂಡಿವೆ. ಕದನೂರು ಗ್ರಾಮದ ಬಾಣೆ ಜಾಗವೂ ನೀರಿನಿಂದ ತುಂಬಿದೆ. ಕದನೂರು ಗ್ರಾಮದ ಕಾವೇರಿ ಉಪ ಹೊಳೆಯು ತುಂಬಿ ಹರಿಯುತ್ತಿದೆ.

18 ಮನೆಗಳು ಜಲಾವೃತ

ಸಿದ್ದಾಪುರದಲ್ಲಿ ಕಾವೇರಿ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ಸಿದ್ದಾಪುರದ ಕರಡಿಗೋಡು ನದಿತೀರದಲ್ಲಿ 18 ಮನೆಗಳು ಜಲಾವೃತಗೊಂಡಿದ್ದು, ಈ ಕುಟುಂಬಗಳು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇದಲ್ಲದೆ ಗುಯ್ಯ ಗ್ರಾಮದಲ್ಲಿ ಕೂಡ ಹಲವಾರು ಮನೆಗಳಿಗೆ ಪ್ರವಾಹದ ನೀರು ಮನೆ ಒಳಗೆ ನುಗ್ಗಿ ಇರುತ್ತದೆ. ನೆಲ್ಯಹುದಿಕೇರಿ ಬೆಟ್ಟದಕಾಡು ಭಾಗದಲ್ಲಿ ನಾಲ್ಕೈದು ಮನೆಗಳಿಗೆ ನೀರು ನುಗ್ಗಿತ್ತು ನದಿತೀರದ ನಿವಾಸಿಗಳು ಪ್ರವಾಹ ಭೀತಿಯಿಂದಾಗಿ ತಮ್ಮ ತಮ್ಮ ಮನೆಗಳನ್ನು ಬೀಗ ಹಾಕಿ ಮುಚ್ಚಿ ಸಾಮಗ್ರಿಗಳನ್ನು ಬೇರೆಕಡೆಗೆ ಸ್ಥಳಾಂತರ ಮಾಡುವ ದೃಶ್ಯ ಕಂಡುಬಂದಿತು. ಸಿದ್ದಾಪುರದ ಕರಡಿಗೋಡು ರಸ್ತೆ ಹಾಗೂ ಗುಯ್ಯ ಕಕ್ಕಟ್ಟು ಕಾಡು ರಸ್ತೆಯಲ್ಲಿ ನೀರು ತುಂಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.

ನೆಲ್ಯಹುದಿಕೇರಿ ಬೆಟ್ಟದಕಾಡು ರಸ್ತೆ ಸಂಪರ್ಕ ಕಡಿತಗೊಂಡಿದೆ. ಕರಡಿಗೋಡು ಚಿಕ್ಕನಳ್ಳಿ ಪೈಸಾರಿಯಲ್ಲಿರುವ ಕಿರುಸೇತುವೆ ಸಂಪೂರ್ಣವಾಗಿ ಮುಚ್ಚಿ ಹೋಗಿರುತ್ತದೆ. ಗಾಳಿ-ಮಳೆಯಿಂದಾಗಿ ಸಿದ್ದಾಪುರದ ಸುತ್ತಮುತ್ತಲ ಪ್ರದೇಶಗಳಲ್ಲಿ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಮೂರು ದಿನಗಳಿಂದ ವಿದ್ಯುತ್ ಸ್ಥಗಿತಗೊಂಡಿದ್ದು, ಕಾರ್ಗತ್ತಲೆಯಲ್ಲಿ ಮುಳುಗಿದೆ. ಇದೇ ರೀತಿಯಲ್ಲಿ ಮಳೆಯು ಮುಂದುವರೆದಲ್ಲಿ ಕರಡಿಗೋಡು ನದಿತೀರದ ತಗ್ಗುಪ್ರದೇಶದಲ್ಲಿರುವ ಮನೆಗಳು ಮುಳುಗಡೆಯಾಗುವ ಸಾಧ್ಯತೆ ಕಂಡುಬಂದಿದೆ.

ಪ್ರವಾಹಕ್ಕೆ ಸಿಲುಕಿ ಜಲಾವೃತಗೊಂಡ 18 ಕುಟುಂಬಗಳಿಗೆ ಕರಡಿಗೋಡು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಪರಿಹಾರ ಕೇಂದ್ರದಲ್ಲಿ ಆಶ್ರಯ ಗಳನ್ನು ನೀಡಲಾಗಿದೆ. ಅಲ್ಲಿ ಆಶ್ರಯ ಪಡೆದಿರುವ ಕುಟುಂಬಗಳ ಸದಸ್ಯರುಗಳಿಗೆÀ ಕೊÀರೊನಾ ವೈರಸ್ ಬಗ್ಗೆ ಮುಂಜಾಗ್ರತ ಕ್ರಮವಾಗಿ ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ತಪಾಸಣೆ ಮಾಡಲಾಯಿತು. ಆದರೆ ಇಲ್ಲೂ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ಈ ಕುಟುಂಬಗಳನ್ನು ಸಂಜೆ ವೇಳೆ ಸ್ವರ್ಣಮಾಲಾ ಕಲ್ಯಾಣ ಮಂಟಪಕ್ಕೆ ಸೇರಿಸಲಾಯಿತು. ಕಂದಾಯ ಪರಿವೀಕ್ಷಕ ಹರೀಶ್, ಕಲ್ಯಾಣ ಮಂಟಪದ ಮಾಲೀಕರೊಂದಿಗೆ ಮಾತುಕತೆ ನಡೆಸಿ ಈ ಕ್ರಮ ಕೈಗೊಂಡರು. ಕಲ್ಯಾಣ ಮಂಟಪದಲ್ಲಾದರೆ ಆಸ್ಪತ್ರೆ ಹಾಗೂ ಆಹಾರ ಸಾಮಗ್ರಿ ಪೂರೈಕೆಗೆ ಅನುಕೂಲವಾಗಲಿದೆ. ಈ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಎಂ.ಹೆಚ್. ಮೂಸಾ, ಮಣಿ, ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಇದ್ದರು. ಕಾವೇರಿ ನದಿಯಲ್ಲಿ ನೀರಿನ ಮಟ್ಟ ಅಪಾಯದಲ್ಲಿ ಹರಿಯುತ್ತಿದ್ದು, ಮುಂಜಾಗ್ರತ ಕ್ರಮವಾಗಿ ಅಗ್ನಿಶಾಮಕ ವಾಹನ ಹಾಗೂ ಬೋಟ್‍ಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸಿದ್ದಾಪುರದಲ್ಲಿ ಪ್ರವಾಹ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮಲೆಕ್ಕಿಗ ಓಬಪ್ಪ ಬಣಕರ್ ಹಾಗೂ ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಸ್ಥಳದಲ್ಲಿ ಮೊಕ್ಕಾಂ ಹೂಡಿ ನದಿತೀರದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವಿ ಮಾಡಿಕೊಂಡರು. ನೆಲ್ಲಿಹುದಿಕೇರಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಗ್ರಾಮಲೆಕ್ಕಿಗ ಸಂತೋಷ್ ಜಿಲ್ಲಾ ಪಂಚಾಯತ್ ಸದಸ್ಯ ಸುನಿತಾ ಮಂಜುನಾಥ್ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳು ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಗ್ರಾಮ ಪಂಚಾಯಿತಿ ಪಿಡಿಓ ಅನಿಲ್ ಕುಮಾರ್ ಹಾಗೂ ಗ್ರಾಮ ಲೆಕ್ಕಿಗ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ನೆಲ್ಯಹುದಿಕೇರಿ ಬೆಟ್ಟದಕಾಡು ಹಾಗೂ ಕುಂಬಾರಗುಂಡಿ ಭಾಗದ ನೂರಾರು ಕುಟುಂಬಗಳು ಪ್ರವಾಹ ಭೀತಿಯಿಂದ ಮನೆಗಳನ್ನು ಬಿಟ್ಟು ಬೇರೆಡೆ ಆಶ್ರಯ ಪಡೆಯಲು ತೆರಳಿದ್ದಾರೆ. ಕಳೆದ ವರ್ಷ ಪ್ರವಾಹಕ್ಕೆ ಸಿಲುಕಿ ಸಂಕಷ್ಟÀ್ಟಕ್ಕೆ ಸಿಲುಕಿಕೊಂಡಿದ್ದ ನದಿತೀರದ ನಿವಾಸಿಗಳು ಇದೀಗ ಮತ್ತೊಮ್ಮೆ ಆತಂಕಕ್ಕೆ ಒಳಗಾಗಿದ್ದಾರೆ.

ಗೋಣಿಕೊಪ್ಪ ವರದಿ: ದಕ್ಷಿಣ ಕೊಡಗಿನಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಮರಗಳು ಉರುಳಿ ಸಾಕಷ್ಟು ರಸ್ತೆ ಸಂಚಾರಕ್ಕೆ ತೊಡಕಾಗಿದೆ. ಸ್ಥಳೀಯರು ,ಅರಣ್ಯ ಇಲಾಖೆ, ಕಂದಾಯ ಇಲಾಖೆ ಸಹಯೋಗದಲ್ಲಿ ತೆರವು ಕಾರ್ಯಗಳು ತುರ್ತಾಗಿ ನಡೆಯುತ್ತಿವೆ.

ಲಕ್ಷ್ಮಣತೀರ್ಥ ನದಿ ಪ್ರವಾಹ ಭೀತಿ ಮುನ್ಸೂಚನೆ ನೀಡಿದೆ. ಬಲ್ಯಮುಂಡೂರು ಮಾರ್ಗದ ಸೇತುವೆ ಸಂಪರ್ಕ ಕಡಿತಗೊಂಡಿದೆ. ಕಾನೂರು, ನಿಟ್ಟೂರು ಭಾಗದಲ್ಲಿ ಕೂಡ ಪ್ರವಾಹ ಎದುರಾಗಿದೆ. ಬಹುತೇಕ ಕೃಷಿ ಭೂಮಿ ಬೆಳೆಯೊಂದಿಗೆ ಮುಳುಗಡೆಯಾಗಿದೆ. ಅಪಾಯದ ಸಾಧ್ಯತೆ ಕೂಡ ಇದೆ.

ಮನೆಗಳಿಗೆ ನೀರು ನುಗ್ಗಿತ್ತು ನದಿತೀರದ ನಿವಾಸಿಗಳು ಪ್ರವಾಹ ಭೀತಿಯಿಂದಾಗಿ ತಮ್ಮ ತಮ್ಮ ಮನೆಗಳನ್ನು ಬೀಗ ಹಾಕಿ ಮುಚ್ಚಿ ಸಾಮಗ್ರಿಗಳನ್ನು ಬೇರೆಕಡೆಗೆ ಸ್ಥಳಾಂತರ ಮಾಡುವ ದೃಶ್ಯ ಕಂಡುಬಂದಿತು. ಸಿದ್ದಾಪುರದ ಕರಡಿಗೋಡು ರಸ್ತೆ ಹಾಗೂ ಗುಯ್ಯ ಕಕ್ಕಟ್ಟು ಕಾಡು ರಸ್ತೆಯಲ್ಲಿ ನೀರು ತುಂಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.

ನೆಲ್ಯಹುದಿಕೇರಿ ಬೆಟ್ಟದಕಾಡು ರಸ್ತೆ ಸಂಪರ್ಕ ಕಡಿತಗೊಂಡಿದೆ. ಕರಡಿಗೋಡು ಚಿಕ್ಕನಳ್ಳಿ ಪೈಸಾರಿಯಲ್ಲಿರುವ ಕಿರುಸೇತುವೆ ಸಂಪೂರ್ಣವಾಗಿ ಮುಚ್ಚಿ ಹೋಗಿರುತ್ತದೆ. ಗಾಳಿ-ಮಳೆಯಿಂದಾಗಿ ಸಿದ್ದಾಪುರದ ಸುತ್ತಮುತ್ತಲ ಪ್ರದೇಶಗಳಲ್ಲಿ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಮೂರು ದಿನಗಳಿಂದ ವಿದ್ಯುತ್ ಸ್ಥಗಿತಗೊಂಡಿದ್ದು, ಕಾರ್ಗತ್ತಲೆಯಲ್ಲಿ ಮುಳುಗಿದೆ. ಇದೇ ರೀತಿಯಲ್ಲಿ ಮಳೆಯು ಮುಂದುವರೆದಲ್ಲಿ ಕರಡಿಗೋಡು ನದಿತೀರದ ತಗ್ಗುಪ್ರದೇಶದಲ್ಲಿರುವ ಮನೆಗಳು ಮುಳುಗಡೆಯಾಗುವ ಸಾಧ್ಯತೆ ಕಂಡುಬಂದಿದೆ.

ಪ್ರವಾಹಕ್ಕೆ ಸಿಲುಕಿ ಜಲಾವೃತಗೊಂಡ 18 ಕುಟುಂಬಗಳಿಗೆ ಕರಡಿಗೋಡು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಪರಿಹಾರ ಕೇಂದ್ರದಲ್ಲಿ ಆಶ್ರಯ ಗಳನ್ನು ನೀಡಲಾಗಿದೆ. ಅಲ್ಲಿ ಆಶ್ರಯ ಪಡೆದಿರುವ ಕುಟುಂಬಗಳ ಸದಸ್ಯರುಗಳಿಗೆÀ ಕೊÀರೊನಾ ವೈರಸ್ ಬಗ್ಗೆ ಮುಂಜಾಗ್ರತ ಕ್ರಮವಾಗಿ ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ತಪಾಸಣೆ ಮಾಡಲಾಯಿತು. ಆದರೆ ಇಲ್ಲೂ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ಈ ಕುಟುಂಬಗಳನ್ನು ಸಂಜೆ ವೇಳೆ ಸ್ವರ್ಣಮಾಲಾ ಕಲ್ಯಾಣ ಮಂಟಪಕ್ಕೆ ಸೇರಿಸಲಾಯಿತು. ಕಂದಾಯ ಪರಿವೀಕ್ಷಕ ಹರೀಶ್, ಕಲ್ಯಾಣ ಮಂಟಪದ ಮಾಲೀಕರೊಂದಿಗೆ ಮಾತುಕತೆ ನಡೆಸಿ ಈ ಕ್ರಮ ಕೈಗೊಂಡರು. ಕಲ್ಯಾಣ ಮಂಟಪದಲ್ಲಾದರೆ ಆಸ್ಪತ್ರೆ ಹಾಗೂ ಆಹಾರ ಸಾಮಗ್ರಿ ಪೂರೈಕೆಗೆ ಅನುಕೂಲವಾಗಲಿದೆ. ಈ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಎಂ.ಹೆಚ್. ಮೂಸಾ, ಮಣಿ, ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಇದ್ದರು. ಕಾವೇರಿ ನದಿಯಲ್ಲಿ ನೀರಿನ ಮಟ್ಟ ಅಪಾಯದಲ್ಲಿ ಹರಿಯುತ್ತಿದ್ದು, ಮುಂಜಾಗ್ರತ ಕ್ರಮವಾಗಿ ಅಗ್ನಿಶಾಮಕ ವಾಹನ ಹಾಗೂ ಬೋಟ್‍ಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸಿದ್ದಾಪುರದಲ್ಲಿ ಪ್ರವಾಹ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮಲೆಕ್ಕಿಗ ಓಬಪ್ಪ ಬಣಕರ್ ಹಾಗೂ ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಸ್ಥಳದಲ್ಲಿ ಮೊಕ್ಕಾಂ ಹೂಡಿ ನದಿತೀರದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವಿ ಮಾಡಿಕೊಂಡರು. ನೆಲ್ಲಿಹುದಿಕೇರಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಗ್ರಾಮಲೆಕ್ಕಿಗ ಸಂತೋಷ್ ಜಿಲ್ಲಾ ಪಂಚಾಯತ್ ಸದಸ್ಯ ಸುನಿತಾ ಮಂಜುನಾಥ್ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳು ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಗ್ರಾಮ ಪಂಚಾಯಿತಿ ಪಿಡಿಓ ಅನಿಲ್ ಕುಮಾರ್ ಹಾಗೂ ಗ್ರಾಮ ಲೆಕ್ಕಿಗ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ನೆಲ್ಯಹುದಿಕೇರಿ ಬೆಟ್ಟದಕಾಡು ಹಾಗೂ ಕುಂಬಾರಗುಂಡಿ ಭಾಗದ ನೂರಾರು ಕುಟುಂಬಗಳು ಪ್ರವಾಹ ಭೀತಿಯಿಂದ ಮನೆಗಳನ್ನು ಬಿಟ್ಟು ಬೇರೆಡೆ ಆಶ್ರಯ ಪಡೆಯಲು ತೆರಳಿದ್ದಾರೆ. ಕಳೆದ ವರ್ಷ ಪ್ರವಾಹಕ್ಕೆ ಸಿಲುಕಿ ಸಂಕಷ್ಟÀ್ಟಕ್ಕೆ ಸಿಲುಕಿಕೊಂಡಿದ್ದ ನದಿತೀರದ ನಿವಾಸಿಗಳು ಇದೀಗ ಮತ್ತೊಮ್ಮೆ ಆತಂಕಕ್ಕೆ ಒಳಗಾಗಿದ್ದಾರೆ.

ಗೋಣಿಕೊಪ್ಪ ವರದಿ: ದಕ್ಷಿಣ ಕೊಡಗಿನಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಮರಗಳು ಉರುಳಿ ಸಾಕಷ್ಟು ರಸ್ತೆ ಸಂಚಾರಕ್ಕೆ ತೊಡಕಾಗಿದೆ. ಸ್ಥಳೀಯರು ,ಅರಣ್ಯ ಇಲಾಖೆ, ಕಂದಾಯ ಇಲಾಖೆ ಸಹಯೋಗದಲ್ಲಿ ತೆರವು ಕಾರ್ಯಗಳು ತುರ್ತಾಗಿ ನಡೆಯುತ್ತಿವೆ.

ಲಕ್ಷ್ಮಣತೀರ್ಥ ನದಿ ಪ್ರವಾಹ ಭೀತಿ ಮುನ್ಸೂಚನೆ ನೀಡಿದೆ. ಬಲ್ಯಮುಂಡೂರು ಮಾರ್ಗದ ಸೇತುವೆ ಸಂಪರ್ಕ ಕಡಿತಗೊಂಡಿದೆ. ಕಾನೂರು, ನಿಟ್ಟೂರು ಭಾಗದಲ್ಲಿ ಕೂಡ ಪ್ರವಾಹ ಎದುರಾಗಿದೆ. ಬಹುತೇಕ ಕೃಷಿ ಭೂಮಿ ಬೆಳೆಯೊಂದಿಗೆ ಮುಳುಗಡೆಯಾಗಿದೆ. ಅಪಾಯದ ಸಾಧ್ಯತೆ ಕೂಡ ಇದೆ.

ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ನಲ್ಲೂರುವಿನಿಂದ ಮಾಯಮುಡಿಗೆ ತೆರಳುವ ರಸ್ತೆಯು ಜಲಾವೃತಗೊಂಡಿದ್ದು, ರಸ್ತೆಯ ಎರಡೂ ಕಡೆಯ ಗದ್ದೆಗಳು ನೀರಿನಲ್ಲಿ ಮುಳುಗಡೆಯಾಗಿವೆ. ಬೇಗೂರು ಗ್ರಾಮಕ್ಕೆ ತೆರಳುವ ರಸ್ತೆ ಹಾಗೂ ಗದ್ದೆಗಳು ಜಲಾವೃತಗೊಂಡಿವೆ.

ಶ್ರೀಮಂಗಲ ವರದಿ: ದಕ್ಷಿಣ ಕೊಡಗಿನಾದ್ಯಂತ ಲಕ್ಷ್ಮಣ ತೀರ್ಥ ನದಿ ಪ್ರವಾಹ ಇಳಿಮುಖವಾಗಿಲ್ಲ. ಸಾವಿರಾರು ಎಕರೆ ಭತ್ತದ ಗದ್ದೆಗಳು ನದಿ ಪಾತ್ರದಲ್ಲಿ ಜಲಾವೃತವಾಗಿದೆ.

ಟಿ.ಶೆಟ್ಟಿಗೇರಿ -ಬಲ್ಯಮುಂಡೂರು, ಹರಿಹರ- ನಾಲ್ಕೇರಿ, ನಾಲ್ಕೇರಿ-ಶ್ರೀಮಂಗಲ, ಬಾಳೆಲೆ-ಮಲ್ಲೂರು ನಡುವಿನ ರಸ್ತೆ ಲಕ್ಷ್ಮಣತೀರ್ಥ ಪ್ರವಾಹಕ್ಕೆ ಮುಳುಗಿದೆ. ಬಾಳೆಲೆ-ಮಲ್ಲೂರು ನಡುವಿನ ಸೇತುವೆ ಮೇಲೆ 10 ಅಡಿ ನೀರು ಹರಿಯುತ್ತಿದೆ.

ಮಲ್ಲೂರು-ಬಾಳೆಲೆ ಮುಖ್ಯರಸ್ತೆಯಲ್ಲಿ ಬೃಹತ್ ಮರ ರಸ್ತೆ ನಡುವೆ ಬಿದ್ದಿದ್ದು, ತೆರವು ಕಾರ್ಯ ಮಾಡಲಾಗಿದೆ.

ದಕ್ಷಿಣ ಕೊಡಗು ವ್ಯಾಪ್ತಿಯಲ್ಲಿ ಆಗಸ್ಟ್ 2 ರಿಂದ ಮಳೆಯಿಂದ ಮಾರ್ಗದಲ್ಲಿ ಉಂಟಾದ ಹಾನಿಯಿಂದ ವಿದ್ಯುತ್ ಕಡಿತ ಮುಂದುವರೆದಿದೆ.

ಮನೆಗೆ ಹಾನಿ: ಟಿ. ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಗುಟ್ಟುಕೊಲ್ಲಿ ನಿವಾಸಿ ಸುಬ್ರಮಣಿ ಮತ್ತು ವೇದಾವತಿ ಅವರ ಮನೆ ಛಾವಣಿ ತೀವ್ರ ಗಾಳಿ ಮಳೆಗೆ ಹಾರಿ ಮುರಿದು ಬಿದ್ದಿದೆ.ಹೊಸ ಶೀಟು ಅಳವಡಿಸದೆ ಮನೆಯಲ್ಲಿ ವಾಸಿಸಲು ಅವರಿಗೆ ಸಾಧ್ಯವಿಲ್ಲ. ಕೂಡಲೇ ಮನೆಯಲ್ಲಿ ವಾಸ ಮಾಡಲು ಜಿಲ್ಲಾಡಳಿತ ವ್ಯವಸ್ಥೆ ಮಾಡಬೇಕು ಎಂದು ಟಿ.ಶೆಟ್ಟಿಗೇರಿ ಗ್ರಾ.ಪಂ.ಮಾಜಿ ಅಧ್ಯಕ್ಷ ಮಚ್ಚಮಾಡ ಸುಮಂತ್ ಆಗ್ರಹಿಸಿದ್ದಾರೆ.

ಬಿರುನಾಣಿ- ನ್ೀಟ್ ಕುಂದ್ ನಡುವೆ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಸಂಪರ್ಕ ಕಡಿತವಾಗಿದೆ.

-ವರದಿ : ಡಿ.ಎಂ.ಆರ್., ಹೆಚ್.ಕೆ. ಜಗದೀಶ್, ಸುದ್ದಿಪುತ್ರ, ಚನ್ನನಾಯಕ್, ಹರೀಶ್ ಮಾದಪ್ಪ, ವಾಸು, ಸುಧಿ