ಸೋಮವಾರಪೇಟೆ, ಆ. 6: ಭಾರೀ ಮಳೆ ಹಿನ್ನೆಲೆ ಅಪಾಯದ ಅಂಚಿನಲ್ಲಿ ಹರಿಯುತ್ತಿರುವ ಕಾವೇರಿ ನದಿ ತಟದ, ಕುಶಾಲನಗರ- ಗಂಧದಕೋಟೆ ಭಾಗದ ರಾಷ್ಟ್ರೀಯ ಹೆದ್ದಾರಿಯನ್ನು ಶಾಸಕ ಅಪ್ಪಚ್ಚು ರಂಜನ್ ಪರಿಶೀಲಿಸಿದರು.

ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಕಾವೇರಿ ನದಿ ಪ್ರವಾಹ ಆವರಿಸಿದ್ದು, ಮಳೆ ಮುಂದುವರೆದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಪರ್ಕ ಕಡಿತಗೊಳ್ಳುವ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದರು.

ಹೆದ್ದಾರಿಯಲ್ಲಿ ಮೋರಿ ನಿರ್ಮಾಣ ಮಾಡಿರುವದರಿಂದ ನದಿ ಪಾತ್ರದ ನೀರು ಮತ್ತೊಂದು ಬದಿಗೆ ನುಗ್ಗುತ್ತಿರುವ ಬಗ್ಗೆ ಸ್ಥಳೀಯರು ಗಮನ ಸೆಳೆದ ಸಂದರ್ಭ, ಈ ಬಗ್ಗೆ ಗಮನಹರಿಸುವದಾಗಿ ರಂಜನ್ ತಿಳಿಸಿದರು. ಈ ಸಂದರ್ಭ ಡಿ.ವೈ.ಎಸ್.ಪಿ. ಶೈಲೇಂದ್ರ ಉಪಸ್ಥಿತರಿದ್ದರು.