ಮನೆಯ ಮೇಲೆ ಭೂಕುಸಿತದಿಂದ ಕಣ್ಮರೆಯಾಗಿರುವ ಹಿರಿಯ ಜೀವಿ ನಾರಾಯಣಾಚಾರ್ ಅವರಿಗೆ ಭವಿಷ್ಯದ ಬಗ್ಗೆ ಕಳವಳವಿತ್ತು. ಕಳೆದ ಮೇ 9 ರಂದು ‘ಶಕ್ತಿ’ ಅವರ ಮನೆಗೆ ಭೇಟಿ ನೀಡಿ ಮಾತನಾಡಿಸಿದ ಸಂದರ್ಭ ತನ್ನ ಮನೆಯ ಮೇಲ್ಭಾಗಕ್ಕೆ ಕರೆದೊಯ್ದು ಭೂಕುಸಿತದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ತಮಗೆ ಮನೆ ತೆರವುಗೊಳಿಸಲು ಜಿಲ್ಲಾಡಳಿತ ಸೂಚಿಸಿದ್ದ ಬಗ್ಗೆಯೂ ನೆನಪಿಸಿದ್ದರು. ಹಿಂದೆಯೂ ಅಲ್ಪಪ್ರಮಾಣದ ಭೂಕುಸಿತ ಉಂಟಾಗಿದ್ದು, ಅಲ್ಲಿ ತಡೆಗೋಡೆ ನಿರ್ಮಿಸಿ ಅವೈಜ್ಞಾನಿಕವಾಗಿ ಮೋರಿ ಅಳವಡಿಸಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. 3 ತಿಂಗಳ ಹಿಂದೆಷ್ಟೆ ನಿಂತು ಸೂಚಿಸಿದ್ದ ಮಣ್ಣೆ ಮನೆಮೇಲೆ ಬಿದ್ದು ಇವರ ಕಣ್ಮರೆಗೆ ಕಾರಣವಾಗಿರುವುದು ದುರಂತ.