ಸೋಮವಾರಪೇಟೆ, ಆ. 6: ಇಲ್ಲಿನ ಅಂಚೆ ಕಚೇರಿಯಲ್ಲಿ ಎಂಟಿಎಸ್ ಆಗಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ಎಂ.ಕೆ. ಕೃಷ್ಣ ಉಪಾಧ್ಯಾಯ ಅವರನ್ನು ಮುಖ್ಯ ಅಂಚೆ ಕಚೇರಿಯಲ್ಲಿ ಸನ್ಮಾನಿಸಿ, ಬೀಳ್ಕೊಡಲಾಯಿತು. ಈ ಸಂದರ್ಭ ಸೋಮವಾರಪೇಟೆ ಅಂಚೆ ಪಾಲಕರಾದ ರೋಡ್ನಿಕೋಟ್ಸ್, ಅಂಚೆ ಉಪ ನಿರೀಕ್ಷಕ ಮಂಜುನಾಥ ಸೇರಿದಂತೆ ಕಚೇರಿಯ ಸಿಬ್ಬಂದಿಗಳು, ಅಂಚೆ ವಿತರಕರು ಉಪಸ್ಥಿತರಿದ್ದರು.