ಕೂಡಿಗೆ, ಆ. 6: ಚಿಕ್ಕಅಳುವಾರ ಗ್ರಾಮದಲ್ಲಿರುವ ರಾಮಲಿಂಗ ಬನಶಂಕರಿ ನೇಕಾರ ದೇವಾಂಗ ಟ್ರಸ್ಟ್ ಇವರ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಆಚರಿಸಲ್ಪಡುವ ಜನಿವಾರ (ನೂಲು ಹುಣ್ಣಿಮೆ) ಹಬ್ಬವನ್ನು ಬನಶಂಕರಿ ದೇವಾಲಯದ ಆವರಣದಲ್ಲಿ ಆಚರಿಸಲಾಯಿತು. ಮೊದಲು ಶ್ರೀ ರಾಮಲಿಂಗ ದೇವರ ಕಲಶವನ್ನು ಪ್ರತಿಷ್ಠಾಪನೆ ಮಾಡಿ ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಪೂಜಾ ಕಾರ್ಯಕ್ರಮದಲ್ಲಿ ಗ್ರಾಮದ ನೂರಾರು ಮಂದಿ ಭಾಗವಹಿಸಿದ್ದರು. ಮಧ್ನಾಹ್ನ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನದಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಟ್ರಸ್ಟ್‍ನ ಅಧ್ಯಕ್ಷ ಡಿ.ಆರ್. ಪ್ರೇಮಕುಮಾರ್, ಕಾರ್ಯದರ್ಶಿ ವಿ.ಪಿ. ಸುನಿಲ್, ಖಜಾಂಚಿ ಪಿ.ಆರ್. ಲೋಕೇಶ್ ಸೇರಿದಂತೆ ಟ್ರಸ್ಟ್‍ನ ನಿರ್ದೇಶಕರು ಮತ್ತು ಸದಸ್ಯರು ಹಾಜರಿದ್ದರು.