ಸೋಮವಾರಪೇಟೆ, ಆ. 6: ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ಸೋಮವಾರಪೇಟೆಯ ನ್ಯಾಯಾಲಯದಲ್ಲಿ ತಾ. 7ರಿಂದ (ಇಂದಿನಿಂದ) ಇ-ಲೋಕ ಅದಾಲತ್ ನಡೆಯಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್.ಆರ್. ದಿಂಡಲಕೊಪ್ಪ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪ್ರತಿಭಾ ಅವರುಗಳು ತಿಳಿಸಿದ್ದಾರೆ.
ತಾ. 7, 14, 21 ಮತ್ತು 28ರಂದು ಇ-ಲೋಕ ಅದಾಲತ್ ನಡೆಯಲಿದ್ದು, ಆಸಕ್ತ ವಕೀಲರು ಮತ್ತು ಕಕ್ಷಿದಾರರು ತಮ್ಮ ದಾವೆಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.