ಒಬ್ಬನ ಬಂಧನ
ವೀರಾಜಪೇಟೆ ಆ. 6: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭೂಮಿ ಪೂಜೆಗಾಗಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಹೊರಡಿಸಿ ಮದ್ಯ ಮಾರಾಟ ನಿಷೇಧ ಮಾಡಿದ್ದರೂ ನಿನ್ನೆ ದಿನ ಇಲ್ಲಿನ ದೊಡ್ಡಟ್ಟಿ ಚೌಕಿ ಬಳಿಯ ನಂದಿನಿ ಹಾಲು ಮಾರಾಟದ ಮಳಿಗೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದುದನ್ನು ಅಲ್ಲಿನ ಕೆಲವರು ನೀಡಿದ ಸುಳಿವಿನ ಮೇರೆ ನಗರ ಪೊಲೀಸರು ಮಳಿಗೆಯ ಮೇಲೆ ದಾಳಿ ನಡೆಸಿ ಅಕ್ರಮ ಮದ್ಯದ ಪ್ಯಾಕೇಟ್‍ಗಳು ಹಾಗೂ ರೂ. 900 ನಗದನ್ನು ವಶಪಡಿಸಿಕೊಂಡು ದಿನೇಶ್‍ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ.
ನಗರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಬೋಜಪ್ಪ ಸಿಬ್ಬಂದಿಗಳು ಈ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.