ನಾಪೆÇೀಕ್ಲು, ಆ. 4: ಹೆತ್ತ ತಂದೆ ತಾಯಿ ಯನ್ನೇ ಮಗ ದೊಣ್ಣೆ ಯಿಂದ ಬಡಿದು ಕೊಲೆ ಮಾಡಿರುವ ದುರ್ಘಟನೆ ಚೆಯ್ಯಂಡಾಣೆ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಕೇರಿ ಗ್ರಾಮದಲ್ಲಿ ನಡೆದಿದೆ.ಎರವರ ರಾಜು (65), ಗೌರಿ (60) ಎಂಬವರುಗಳೇ ತನ್ನ ಮಗನಿಂದ ಸಾವಿಗೀಡಾದ ದುರ್ದೈವಿಗಳು. ಅಯ್ಯಪ್ಪ (26) ಕೊಲೆಗೈದ ಆರೋಪಿ. ಘಟನೆ ವಿವರ: ಈ ಮೂವರು ಕೋಕೇರಿ ಗ್ರಾಮದ ಚೇನಂಡ ಶಿವಾಜಿ ಸೋಮಯ್ಯ ಎಂಬವರ ಲೈನ್ಮನೆಯಲ್ಲಿ ಕೂಲಿ ಕಾರ್ಮಿಕರಾಗಿ ವಾಸವಾಗಿದ್ದರು. ಮಂಗಳವಾರ (ಮೊದಲ ಪುಟದಿಂದ) ಬೆಳಿಗ್ಗೆ ಮಾಲೀಕ ಶಿವಾಜಿ ಕಾರ್ಮಿಕರನ್ನು ಕೆಲಸಕ್ಕೆ ಕರೆಯಲು ಹೋದ ಸಂದರ್ಭ ಅಯ್ಯಪ್ಪ ತನ್ನ ತಂದೆ-ತಾಯಿಯನ್ನು ಬಡಿದು ಕೊಂದಿರುವದಾಗಿ ತಿಳಿಸಿದ್ದಾನೆ. ಕೂಡಲೇ ಅವರು ನಾಪೆÇೀಕ್ಲು ಪೆÇಲೀಸ್ ಠಾಣೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ನಾಪೆÇೀಕ್ಲು ಠಾಣಾಧಿಕಾರಿ ಆರ್. ಕಿರಣ್ ಮತ್ತು ತಂಡ ಸ್ಥಳಕಾಗಮಿಸಿ ಆರೋಪಿ ಅಯ್ಯಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮದ್ಯದ ಅಮಲಿನಲ್ಲಿ ನಡೆದ ಕಲಹವೇ ಘಟನೆಗೆ ಕಾರಣ ಎನ್ನಲಾಗಿದೆ. ಈ ಬಗ್ಗೆ ನಾಪೆÇೀಕ್ಲು ಪೆÇಲೀಸ್ ಠಾಣೆಯಲ್ಲಿ ತೋಟದ ಮಾಲೀಕ ಶಿವಾಜಿ ಸೋಮಯ್ಯ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಮೃತ ದಂಪತಿಗೆ ಮೂವರು ಮಕ್ಕಳಿದ್ದು, ಅಯ್ಯಪ್ಪ್ಬ ಮಗ ಮಾತ್ರ ಅವರೊಂದಿಗೆ ವಾಸವಾಗಿದ್ದ. ಇತರರು ಎಲ್ಲಿದ್ದಾರೆಂಬ ಮಾಹಿತಿ ಲಭಿಸಿಲ್ಲ. ಘಟನಾ ಸ್ಥಳಕ್ಕೆ ಮಡಿಕೇರಿ ಡಿವೈಎಸ್ಪಿ ದಿನೇಶ್ ಕುಮಾರ್, ಗ್ರಾಮಾಂತರ ಠಾಣಾ ವೃತ್ತನಿರೀಕ್ಷಕ ದಿವಾಕರ್, ಭೇಟಿ ನೀಡಿದ್ದರು.