ಮಡಿಕೇರಿ, ಆ. 5: ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯೊಂದಿಗೆ ದಕ್ಷಿಣ ಕೊಡಗಿನ ಬಿರುನಾಣಿ, ಹುದಿಕೇರಿ ಸುತ್ತಮುತ್ತ 11.69 ಇಂಚು ಅತ್ಯಧಿಕ ಮಳೆ ದಾಖಲಾಗಿದೆ.
ತಲಕಾವೇರಿ ಸುತ್ತ ಮುತ್ತ 9 ಇಂಚು ಮಳೆಯಾದರೆ ಭಾಗಮಂಡಲ ವ್ಯಾಪ್ತಿಯಲ್ಲಿ 7.48 ಇಂಚು ಮಳೆ ಬಿದ್ದಿದೆ. ಉತ್ತರ ಕೊಡಗಿನ ಶಾಂತಳ್ಳಿ ವ್ಯಾಪ್ತಿಯಲ್ಲಿ ಹಾಗೂ ಪುಷ್ಪಗಿರಿ ತಪ್ಪಲು ಗ್ರಾಮೀಣ ಭಾಗಗಳಲ್ಲಿ 8.66 ಇಂಚು ಮಳೆ ದಾಖಲಾಗಿದೆ.
ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸುತ್ತಮುತ್ತ 8.93 ಇಂಚು, ನಾಪೋಕ್ಲು 4.98 ಇಂಚು, ಸೋಮವಾರಪೇಟೆ ತಾಲೂಕು ಕೇಂದ್ರದಲ್ಲಿ 4.70 ಇಂಚು, ಕೊಡ್ಲಿಪೇಟೆ ವ್ಯಾಪ್ತಿಗೆ 5.91 ಇಂಚು, ಶನಿವಾರಸಂತೆ 4.63 ಇಂಚು ಮಳೆ ಬಿದ್ದಿದೆ. ವೀರಾಜಪೇಟೆ ತಾಲೂಕು ಕೇಂದ್ರದಲ್ಲಿ 4.97 ಇಂಚು, ಬಾಳೆಲೆ ವ್ಯಾಪ್ತಿಗೆ 7.08 ಇಂಚು, ಪೊನ್ನಂಪೇಟೆ ಸುತ್ತಮುತ್ತ 7.67 ಇಂಚು, ಶ್ರೀಮಂಗಲ 5.66 ಇಂಚು ಮಳೆಯಾಗಿದೆ.
ಕೊಡಗಿನಾದ್ಯಂತ 5.61 ಇಂಚು ಸರಾಸರಿ ಮಳೆಯಾಗಿದೆ. ಇನ್ನುಳಿದಂತೆ ಕುಶಾಲನಗರ 1.14 ಇಂಚು, ಸುಂಟಿಕೊಪ್ಪ 2.17 ಇಂಚು, ಹಾರಂಗಿ 1.22 ಇಂಚು, ಅಮ್ಮತ್ತಿ 1.81 ಇಂಚು ಮಳೆ ದಾಖಲಾಗಿದೆ.
ಹಾರಂಗಿ ಜಲಾಶಯ: ಹಾರಂಗಿ ಜಲಾಶಯ ಗರಿಷ್ಠ 2859 ಅಡಿಗಿಂತ ಪ್ರಸ್ತುತ 2858.94 ಅಡಿ ನೀರಿದೆ. ಜಲಾಶಯಕ್ಕೆ 7182 ಕ್ಯೂಸೆಕ್ಸ್ ಒಳ ಹರಿವು ಹಾಗೂ 9425 ಕ್ಯೂಸೆಕ್ಸ್ ನದಿಗೆ ಬಿಡಲಾಗಿದೆ. ನಾಲೆಗೆ 595 ಕ್ಯೂಸೆಕ್ಸ್ ಹರಿಸಲಾಗುತ್ತಿದೆ.