ನಾಲ್ಕನೇ ಪುಟದಿಂದ ಶಾಂತಗೇರಿ, ಉಲುಗುಲಿ, ಗದ್ದೆಹಳ್ಳ, ಪಣ್ಯ ಬೆಟ್ಟಗೇರಿ, ಹರದೂರು ಗ್ರಾಮಸ್ಥರು ಪರದಾಡುವಂತಾಯಿತು.
ನಾಕೂರು ಶಿರಂಗಾಲ ಗ್ರಾಮದಲ್ಲಿ 9 ಕಂಬ ಹೊಸಕೋಟೆಯಲ್ಲಿ 2 ಕಂಬಗಳು ಗಾಳಿ ಮಳೆಗೆ ನೆಲಕಚ್ಚಿದ್ದು ಉಲುಗುಲಿ ರಸ್ತೆಯಲ್ಲಿ 6 ಕಡೆ ವಿದ್ಯುತ್ ತಂತಿ ತುಂಡಾಗಿ ನಷ್ಟ ಸಂಭವಿಸಿದೆ ಎಂದು ಸೆಸ್ಕ್ ಕಿರಿಯ ಅಭಿಯಂತರ ಜಯದೀಪ್ ತಿಳಿಸಿದ್ದಾರೆ. ಮಾದಾಪುರ ವ್ಯಾಪ್ತಿಯಲ್ಲಿ 19 ಕಂಬಗಳು ಧರೆಗುರುಳಿದ್ದು, ಗಾಳಿಮಳೆ ನಡುವೆ ಸೆಸ್ಕ್ ಸಿಬ್ಬಂದಿಗಳು ಹರಸಾಹಸ ಪಟ್ಟು ವಿದ್ಯುತ್ ಕಂಗಳನ್ನು ಸರಿಪಡಿಸಿದ್ದಾರೆ.
ಸುಂಟಿಕೊಪ್ಪ: ಮಾದಾಪುರ ಇಗ್ಗೋಡ್ಲು ಬೆಟ್ಟ ಪೈಸಾರಿಯಲ್ಲಿ ಬರೆ ಕುಸಿತಗೊಂಡು 2 ಮನೆಗಳಿಗೆ ಹಾನಿಯಾಗಿವೆ.
ಮಾದಾಪುರ ಭಾಗದಲ್ಲಿ ಕಳೆದ 2 ದಿನಗಳಿಂದ ಭಾರೀ ಗಾಳಿಯೊಂದಿಗೆ ಮಳೆಯ ಸುರಿಯಲಾರಂಭಿಸಿದ್ದು, ಇಗ್ಗೋಡ್ಲು ಬೆಟ್ಟ ಪೈಸಾರಿಯ ನಿವಾಸಿ ಬೆಳ್ಳಿಯಪ್ಪ ಹಾಗೂ ಪೊನ್ನಪ್ಪ ಎಂಬವರ ಮನೆಯ ಹಿಂಬದಿಯ ಬರೆ ಕುಸಿತಗೊಂಡಿದ್ದು ಮನೆ ಹಿಂಭಾಗ ಅಪಾಯದ ಅಂಚಿನಲ್ಲಿದೆ.
ಅಪಾಯದ ಸ್ಥಳಗಳಿಗೆ ಭೇಟಿ
ಸಿದ್ದಾಪುರ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿರುವ ಹಿನ್ನೆಲೆ ಹಾಗೂ ಪ್ರವಾಹದ ಭೀತಿ ಎದುರಾಗಿರುವ ಪ್ರವಾಹ ಪೀಡಿತ ಪ್ರದೇಶ ಕರಡಿಗೋಡುವಿನ ಅಪಾಯದ ಮಟ್ಟದಲ್ಲಿ ಇರುವ ಸ್ಥಳಗಳಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಅನನ್ಯ ಕುಮಾರ್, ಸಿದ್ದಾಪುರ ಠಾಣಾಧಿಕಾರಿ ಮೋಹನ್‍ರಾಜ್ ಹಾಗೂ ಸಿಬ್ಬಂದಿಗಳು ಕಂದಾಯ ಪರಿವೀಕ್ಷಕ ಹರೀಶ್ ಭೇಟಿ ನೀಡಿ ಮುಂಜಾಗ್ರತಾ ಕ್ರಮವಾಗಿ ಪರಿಶೀಲನೆ ನಡೆಸಿದರು. ಕರಡಿಗೋಡು ನದಿ ತೀರದ ಅಪಾಯದಲ್ಲಿರುವ ನಾಲ್ಕು ಮನೆಗಳ ಕುಟುಂಬಸ್ಥರನ್ನು ಅವರ ಸಂಬಂಧಿಕರ ಮನೆಗೆ ಕಳಿಸಲಾಯಿತು. ಅಪಾಯದಲ್ಲಿರುವ ಜಲಾವೃತಗೊಳ್ಳುವ ಮನೆಗಳ ಕುಟುಂಬಸ್ಥರು ಕೂಡಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಿದರು.
ಶನಿವಾರಸಂತೆ: ಪಟ್ಟಣ ಹಾಗೂ ಹೋಬಳಿಯಾದ್ಯಂತ ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆಯವರೆಗೂ ಗಾಳಿ ಸಹಿತ ಧಾರಾಕಾರ ಮಳೆ ಸುರಿಯಿತು. 2 ಇಂಚಿಗೂ ಅಧಿಕ ಮಳೆಯಾಗಿದೆ. ಗಾಳಿಯ ರಭಸಕ್ಕೆ ರಸ್ತೆ, ತೋಟ ಸೇರಿದಂತೆ ಅಲ್ಲಲ್ಲಿ ಮರಗಿಡಗಳು ಧರೆಗುರುಳಿವೆ.
ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಬಿಳಾಹ, ಕಿರಿಬಿಳಾಹ, ಕಾಜೂರು, ಕೊಜಗೇರಿ ಗ್ರಾಮಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, 2.25 ಇಂಚು ಮಳೆಯಾಗಿದೆ. ಸೋಮವಾರ 4 ಇಂಚಿಗೂ ಅಧಿಕ ಮಳೆಯಾಗಿದೆ. ರೈತರು ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ಗದ್ದೆಗಳಲ್ಲಿ ನಾಟಿ ಕೆಲಸ ಮಾಡುತ್ತಿರುವುದು ಕಂಡಬಂತು.
ಸಂಪೂರ್ಣ ಬತ್ತಿ ಹೋಗಿದ್ದ ಕಾಜೂರು ಹೊಳೆ 2 ದಿನಗಳ ಮಳೆಗೆ ತುಂಬಿ ಗದ್ದೆ ಮಟ್ಟಕ್ಕೆ ಹರಿಯುತ್ತಿದೆ.
-ವಿಜಯ್ ಹಾನಗಲ್, ನಾಗರಾಜಶೆಟ್ಟಿ, ಕೆ.ಡಿ. ಸುನಿಲ್, ಪ್ರಭಾಕರ್, ಚೆನ್ನನಾಯಕ, ಹರೀಶ್ ಮಾದಪ್ಪ, ಸುದ್ದಿ ಪುತ್ರ,
ಸಿಂಚು, ಜಗದೀಶ್ ಹೆಚ್.ಕೆ., ವಾಸು, ಡಿ.ಎಂ.ಆರ್. ಗಣೇಶ್, ದುಗ್ಗಳ, ಮೂರ್ತಿ, ರಾಜುರೈ,