ಸೋಮವಾರಪೇಟೆ, ಆ.4: ಸಮೀಪದ ಆಲೇಕಟ್ಟೆ ರಸ್ತೆಯ ಭಾರತೀಯ ಯುವಕ ಸಂಘದ ಅಧ್ಯಕ್ಷರಾಗಿ ಹೆಚ್.ಕೆ. ಗಂಗಾಧರ್ ಆಯ್ಕೆಯಾಗಿದ್ದಾರೆ. ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಜಿ. ಕೃಷ್ಣಮೂರ್ತಿ, ಉಪಾಧ್ಯಕ್ಷರಾಗಿ ಎ.ಆರ್. ಸತೀಶ್, ಸಹ ಕಾರ್ಯದರ್ಶಿಯಾಗಿ ಬಿ.ಎನ್. ಮಂಜುನಾಥ್, ಖಜಾಂಚಿಯಾಗಿ ಎಂ.ಕೆ. ರಾಜೇಂದ್ರ, ಗೌರವ ಅಧ್ಯಕ್ಷರಾಗಿ ಎನ್.ಪಿ. ಮಂಜುನಾಥ್ ಅವರುಗಳನ್ನು ಆಯ್ಕೆ ಮಾಡಲಾಯಿತು.

ಇದರೊಂದಿಗೆ ಗೌರವ ಸಲಹೆಗಾರರಾಗಿ ಸಿ.ಕೆ. ಮೋಹನ್, ಮನುಕುಮಾರ್ ರೈ, ಶಶಿಕುಮಾರ್, ನರಸಿಂಹ, ನೆಹರು, ನಿರ್ದೇಶಕರಾಗಿ ನರೇಂದ್ರ, ಪದ್ಮನಾಭ್, ಚಂದ್ರಶೇಖರ್, ಅನಿಲ್ ಸಿಕ್ವೇರಾ, ಶ್ರೀಜಿತ್, ಶಿವಪ್ರಸಾದ್ ಅವರುಗಳನ್ನು ನೇಮಕ ಮಾಡಲಾಯಿತು.