ಕೂಡಿಗೆ, ಆ. 5: ಸೋಮವಾರಪೇಟೆ ತಾಲೂಕು ದಂಡಾಧಿಕಾರಿ ಗೋವಿಂದರಾಜ್ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಸುನಿಲ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಕಾವೇರಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಣಿವೆಯ ತೂಗುಸೇತುವೆ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪ್ರವಾಸಿಗರಿಗೂ ಹೆಚ್ಚು ಕಾಲ ತೂಗುಸೇತುವೆಯ ಮೇಲೆ ನಿಲ್ಲದೆ ನದಿಯ ನೀರನ್ನು ನೋಡಿ ಹಿಂತಿರುಗುವಂತೆ ತಿಳುವಳಿಕೆ ನೀಡಿದರು. ಹೆಬ್ಬಾಲೆ, ಕೂಡಿಗೆ, ಕಣಿವೆ, ಹುದುಗೂರು ಗ್ರಾಮಗಳಲ್ಲಿ ರೈತರ ಜಮೀನಿಗೆ ನೀರು ನುಗ್ಗಿರುವ ಸ್ಥಳಗಳಿಗೆ ಭೇಟಿ ನೀಡಿದರು.