ಕುಟ್ಟ, ಆ. 4: ಕುಟ್ಟ ಗಡಿಯನ್ನು ತೆರೆಯದಂತೆ ಸಾರ್ವಜನಿಕರು, ಸಂಘ ಸಂಸ್ಥೆ ಸೇರಿದಂತೆ ವ್ಯಾಪಾರಿ ಹಾಗೂ ರೈತ ಸಂಘ ಮುಖಂಡರು ಕುಟ್ಟ ವೃತ ನಿರೀಕ್ಷಕ ಸಭೆಯಲ್ಲಿ ಒತ್ತಾಯಿಸಿದ್ದಾರೆ. ಈ ಮೂಲಕ ಜಿಲ್ಲಾಧಿಕಾರಿಗೆ ತಿಳಿಸುವಂತೆ ಸಭೆಯಲ್ಲಿ ಮನವಿ ಮಾಡಿದ್ದಾರೆ.
ಕೇರಳದ ವಯನಾಡುವಿನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ತೋಲ್‍ಪಟ್ಟಿಯಲ್ಲಿಯೂ ಸೋಂಕಿತರಿಗೆ ಕ್ವಾರಂಟೈನ್ ಕೇಂದ್ರ ತೆರೆಯಲಾಗಿದೆ. ಆದ್ದರಿಂದ ಮುಂದೆ ಕುಟ್ಟದ ಜನರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಸಭೆಯಲ್ಲಿ ಸೇರಿದ ಎಲ್ಲರೂ ಗಡಿ ತೆರೆಯದಂತೆ ಒತ್ತಾಯಿಸಿದ್ದಾರೆ.