ಮಡಿಕೇರಿ, ಆ. 4: ಮರಗೋಡುವಿನ ಪರಂಬು ಪೈಸಾರಿಯಲ್ಲಿ ಒಂಟಿಯಾಗಿ ವಾಸವಿದ್ದ ಪಾರ್ವತಿ (74) ಎಂಬ ವೃದ್ಧೆಯನ್ನು ಯಾರೋ ದುಷ್ಕರ್ಮಿಗಳು ಕೊಲೆಗೈದು ಚಿನ್ನಾಭರಣ ದೋಚಿರುವುದು ಬೆಳಕಿಗೆ ಬಂದಿದೆ. ಕಳೆದ ಭಾನುವಾರ ರಾತ್ರಿ ದುಷ್ಕøತ್ಯ ನಡೆದಿರುವ ಶಂಕೆಯಿದ್ದು, ಮೃತೆ ವೃದ್ಧೆಯ ಸಾವಿನ ಸುದ್ದಿ ತಿಳಿದು ಸಂಬಂಧಿ ಆತ್ಮನಂದ ಎಂಬವರು ಗ್ರಾಮಾಂತರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಆಕೆಯು ಧರಿಸಿದ್ದ ಚಿನ್ನದ ಸರ, ಕಿವಿಯೋಲೆ ಇತ್ಯಾದಿಯನ್ನು ದುಷ್ಕರ್ಮಿಗಳು ದೋಚಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಡಿವೈಎಸ್ಪಿ ಬಿ.ಪಿ. ದಿನೇಶ್‍ಕುಮಾರ್, ವೃತ್ತ ನಿರೀಕ್ಷP ದಿವಾಕರ್, ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್ ಮತ್ತು ಸಿಬ್ಬಂದಿ ಸ್ಥಳ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.