ಮಡಿಕೇರಿ, ಆ. 4: ಜಿಲ್ಲೆಯಲ್ಲಿ ಹೊಸದಾಗಿ 47 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 560 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 342 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಒಟ್ಟು 10 ಮಂದಿ ಮೃತಪಟ್ಟಿದ್ದು, 208 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯಾದ್ಯಂತ 151 ನಿಯಂತ್ರಿತ ವಲಯಗಳಿವೆ. ಹೊಸ ಪ್ರಕರಣಗಳ ವಿವರ

ಮಾದಾಪುರದ ಗರಗಂದೂರಿನ ಲಕ್ಕೇರಿ ಎಸ್ಟೇಟ್ ನ 23 ವರ್ಷದ ಪುರುಷ, ಅಬ್ಬೂರುಕಟ್ಟೆ ಯಲಕ್ನೂರುವಿನ 59 ವರ್ಷದ ಪುರುಷ, ಸೋಮವಾರಪೇಟೆಯ ರೇಂಜರ್ ಬ್ಲಾಕಿನ 30 ವರ್ಷದ ಮಹಿಳೆ, ಶನಿವಾರಸಂತೆಯ ಕೂಡ್ಲೂರುವಿನ 53 ವರ್ಷದ ಪುರುಷ, ಶನಿವಾರಸಂತೆಯ ಮಾದ್ರೆ ಬಸಳ್ಳಿ ಮುಖ್ಯ ರಸ್ತೆಯ 58, 63 ಮತ್ತು 75 ವರ್ಷದ ಪುರುಷರು, ಸೋಮವಾರಪೇಟೆಯ ಚೆಟ್ಟಳ್ಳಿ ಬಳಿಯ 59 ಮತ್ತು 43 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತೆಯರು, ತಾಕೇರಿ ಪೆÇೀಸ್ಟ್ ಆಫೀಸ್ ಬಳಿಯ 68 ವರ್ಷದ ಪುರುಷ, ಸೋಮವಾರಪೇಟೆಯ ಐಗೂರಿನ ಪಂಚಾಯ್ತಿ ಕಚೇರಿ ಬಳಿಯ 38 ವರ್ಷದ ಮಹಿಳೆ, ಸೋಮವಾರಪೇಟೆಯ ವಾಲ್ನೂರುವಿನ ಕಾಪೆರ್Çರೇಶನ್ ಬ್ಯಾಂಕ್ ಕಟ್ಟಡದ 32 ವರ್ಷದ ಪುರುಷ, ಸೋಮವಾರಪೇಟೆ ವಾಲ್ನೂರುವಿನ ಕಾಫಿ ವರ್ಕ್‍ಶಾಪ್ ಸಮೀಪದ 43 ವರ್ಷದ ಪುರುಷ, ಸೋಮವಾರಪೇಟೆಯ ಕೂಡ್ಲೂರು ಚೆಟ್ಟಳ್ಳಿಯ 48 ವರ್ಷದ ಪುರುಷ, ಸೋಮವಾರಪೇಟೆಯ ಹೆಬ್ಬಾಲೆಯ ಕೊಪ್ಪುಲು ಬಡಾವಣೆಯ 42 ವರ್ಷದ ಪುರುಷ, ಶಿರಂಗಾಲದ 30 ವರ್ಷದ ಪುರುಷ, ಸೋಮವಾರಪೇಟೆ ಮಾದಾಪುರದ ಮಾರ್ಕೆಟ್ ರಸ್ತೆಯ 42 ವರ್ಷದ ಮಹಿಳೆ, ಮಡಿಕೇರಿ ಪೆನ್‍ಶನ್ ಲೈನಿನ 37 ವರ್ಷದ ಪುರುಷ, ಸೋಮವಾರಪೇಟೆಯ ತ್ಯಾಗರಾಜ ರಸ್ತೆಯ ಎಸ್.ಬಿ.ಐ ಕಟ್ಟಡದ 29 ವರ್ಷದ ಪುರುಷ, ಸೋಮವಾರಪೇಟೆಯ ಚೆಟ್ಟಳ್ಳಿ ಶಿರಂಗಾಲ ಚೇರಲದ ಮಸೀದಿ ರಸ್ತೆಯ 55 ವರ್ಷದ ಪುರುಷ, ಸೋಮವಾರಪೇಟೆ ಮಾದಾಪುರದ ಹೊಸತೋಟದ 51 ವರ್ಷದ ಮಹಿಳೆ, ಮಡಿಕೇರಿ ಕನ್ನಿಕಾ ಬಡಾವಣೆಯ (ಮೊದಲ ಪುಟದಿಂದ) 45 ವರ್ಷದ ಪುರುಷ, ಮೈಸೂರು ಪ್ರಯಾಣದ ಇತಿಹಾಸ ಹೊಂದಿರುವ ಮಡಿಕೇರಿ ಚೈನ್ ಗೇಟ್ ಬಳಿಯ ಅರಣ್ಯ ಇಲಾಖೆ ವಸತಿ ಗೃಹದ 33 ವರ್ಷದ ಪುರುಷ, ಸೋಮವಾರಪೇಟೆಯ ಕಾಳಿದೇವನ ಹೊಸೂರು ಹಾಡಿ ಬಳಿಯ 9 ವರ್ಷದ ಬಾಲಕ, ಶನಿವಾರಸಂತೆಯ ಆಲೂರು ಗ್ರಾಮ ಅಂಚೆಯ 65 ವರ್ಷದ ಪುರುಷ, ಮಡಿಕೇರಿ ಪೆÇಲೀಸ್ ವಸತಿ ಗೃಹದ 42 ಮತ್ತು 20 ವರ್ಷದ ಮಹಿಳೆ, 47 ವರ್ಷದ ಪುರುಷ, 32 ವರ್ಷದ ಮಹಿಳೆ, 33 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಮಡಿಕೇರಿಯ ಹಿಲ್ ರಸ್ತೆಯ ಕಾಶಿ ಕಾಂಪೌಂಡಿನ 43 ವರ್ಷದ ಪುರುಷ ಮತ್ತು 41 ವರ್ಷದ ಮಹಿಳೆ, ಮಡಿಕೇರಿಯ ಗಾಳಿಬೀಡುವಿನ ಮೊಣ್ಣಂಗೇರಿಯ 79 ವರ್ಷದ ಪುರುಷ, 60 ಮತ್ತು 33 ವರ್ಷದ ಮಹಿಳೆ, 6 ವರ್ಷದ ಬಾಲಕ, 28 ವರ್ಷದ ಮಹಿಳೆ ಮತ್ತು 37 ವರ್ಷದ ಪುರುಷ, ಸೋಮವಾರಪೇಟೆಯ ಅಬ್ಬೂರು ಕಟ್ಟೆ ಯಲಕ್ನೂರುವಿನ 21 ಮತ್ತು 49 ವರ್ಷದ ಮಹಿಳೆಯರು, ಸೋಮವಾರಪೇಟೆ ಬಸವನಹಳ್ಳಿಯ ಮೋರಿಕಲ್ಲುವಿನ 38 ವರ್ಷದ ಮಹಿಳೆ, 8 ಮತ್ತು 6 ವರ್ಷದ ಬಾಲಕಿ, ಬೆಂಗಳೂರು ಪ್ರಯಾಣದ ಇತಿಹಾಸ ಹೊಂದಿರುವ 28 ವರ್ಷದ ಪುರುಷ, ಮಡಿಕೇರಿಯ ಕನ್ನಂಡಬಾಣೆಯ 26 ವರ್ಷದ ಪುರುಷ ಮತ್ತು 64 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.